Sunday, April 20, 2025
Homeಸುದ್ದಿಗಳುಆಲೂರು : ಹಂಪನಗುಪ್ಪೆ ಗ್ರಾಮದ ಸೈನಿಕ ಹೆಚ್.ಯೋಗೇಶ್ ಆತ್ಮಹತ್ಯೆ

ಆಲೂರು : ಹಂಪನಗುಪ್ಪೆ ಗ್ರಾಮದ ಸೈನಿಕ ಹೆಚ್.ಯೋಗೇಶ್ ಆತ್ಮಹತ್ಯೆ

ಆಲೂರು : ಹಂಪನಗುಪ್ಪೆ ಗ್ರಾಮದ ಸೈನಿಕ ಹೆಚ್.ಯೋಗೇಶ್ ಆತ್ಮಹತ್ಯೆ 

ಆಲೂರು : ಇಂಡಿಯನ್ ಆರ್ಮಿಯ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ಹಂಪನಗುಪ್ಪೆ ಗ್ರಾಮದ ಹೆಚ್.ಯೋಗೇಶ್ (28) ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಂಪನಗುಪ್ಪೆ ಗ್ರಾಮದ ಹರೀಶ್ ಆಲೂರು ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೆಡ್ ಕುಕ್ಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಇವರ ಎರಡನೇ ಮಗ ಯೋಗೇಶ್ ಅವರು ಮಂಗಳವಾರ ಬೆಳಿಗ್ಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇವರ ಅಂತ್ಯಕ್ರಿಯೆ ಹಂಪನಗುಪ್ಪೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನೆರವೇರಲಿದೆ. 

ಯೋಗೇಶ್ ಅವರು 2011ರಲ್ಲಿ ಹಾಸನದಲ್ಲಿ ನಡೆದ ನೇಮಕ ರ‌್ಯಾಲಿಯಲ್ಲಿ ಸೈನ್ಯಕ್ಕೆ ಸೇರಿಕೊಂಡಿದ್ದರು. ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದು ಮಕ್ಕಳಿರಲಿಲ್ಲ ಎಂದು ತಿಳಿದು ಬಂದಿದೆ.ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಜ.4 ರಂದು ಕರ್ತವ್ಯಕ್ಕೆ ರಜೆ ಹಾಕಿ ಗ್ರಾಮಕ್ಕೆ ಬಂದಿದ್ದ ಯೋಗೇಶ್ ಪತ್ನಿ ದೀಕ್ಷಾ ಹಾಗೂ ಕುಟುಂಬಸ್ಥರೊಂದಿಗೆ ಒಂದು ತಿಂಗಳಿಂದ ಚೆನ್ನಾಗಿಯೇ ಇದ್ದರು.ಮೃತರು ಪತ್ನಿ ತಂದೆ ಹರೀಶ್ ಅಣ್ಣ ಪವನ್ ಅವರನ್ನು ಆಗಲಿದ್ದಾರೆ.

RELATED ARTICLES
- Advertisment -spot_img

Most Popular