ಸಕಲೇಶಪುರ: ಸಕಲೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ನಡೆದ 65ನೇ ವರ್ಷದ ದನಗಳ ಜಾತ್ರೆ ಹಾಗೂ ವಸ್ತುಪ್ರದರ್ಶನದ ಅಂಗವಾಗಿ ಪಟ್ಟಣದ ಸುಭಾಷ್ ಮೈದಾನದಲ್ಲಿ ನಡೆದ ವಿವಿಧ ಇಲಾಖೆಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 20 ಇಲಾಖೆಗಳ ತಂಡಗಳು ಭಾಗವಹಿಸಿದ್ದು ಅಂಚೆ ಇಲಾಖೆ ತಂಡ ಪ್ರಥಮ ಸ್ಥಾನ ಪಡೆದರೆ ಚೆಸ್ಕಾಂ ತಂಡ ದ್ವಿತೀಯಾ ಸ್ಥಾನ ಪಡೆಯಿತು. ಅಂತಿಮ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಂಚೆ ಇಲಾಖೆ ತಂಡದ ಆಟಗಾರ ಅಕ್ಷಯ್ ರವರ ಭರ್ಜರಿ ಆಟದಿಂದ 3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 40ರನ್ ಮಾಡಿದ್ದು, ಇದನ್ನು ಬೆನ್ನಟ್ಟಿದ್ದ ಚೆಸ್ಕಾಂ ತಂಡದ ಆಟಗಾರರು 4 ವಿಕೆಟ್ ನಷ್ಟಕ್ಕೆ ಕೇವಲ 28 ರನ್ ಮಾಡಿ ಗುರಿ ಸಾಧಿಸಲು ವಿಫಲರಾಗಿ ದ್ವಿತೀಯಾ ಸ್ಥಾನಕ್ಕೆ ತೃಪ್ತರಾದರು. ಒಟ್ಟಾರೆಯಾಗಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಪ್ರತಿಭೆಯನ್ನು ಹೊರ ಹಾಕಲು ಈ ಪಂದ್ಯಾವಳಿ ನೆರವಾಯಿತು. ಅಂಚೆ ತಂಡದ ಅಕ್ಷಯ್ ಹಾಗೂ ದುಷ್ಯಂತ್ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದರೆ,ಚೆಸ್ಕಾಂ ತಂಡದ ವಿವೇಕ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ಒಟ್ಟಾರೆಯಾಗಿ ಕ್ರಿಕೆಟ್ ಪಂದ್ಯಾವಳಿ ನೋಡುಗರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.