Sunday, November 24, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ :ಧರ್ಮಸ್ಥಳಕ್ಕೆ ಸಂಚರಿಸುವ ಪಾಚಾಚಾರಿಗಳು ಸಂಜೆ 7 ಗಂಟೆಯ ನಂತರ ತೆರಳುವುದನ್ನು ತಡೆಯುವಂತೆ ಅಗ್ರಹ 

ಸಕಲೇಶಪುರ :ಧರ್ಮಸ್ಥಳಕ್ಕೆ ಸಂಚರಿಸುವ ಪಾಚಾಚಾರಿಗಳು ಸಂಜೆ 7 ಗಂಟೆಯ ನಂತರ ತೆರಳುವುದನ್ನು ತಡೆಯುವಂತೆ ಅಗ್ರಹ 

ಸಕಲೇಶಪುರ :ಧರ್ಮಸ್ಥಳಕ್ಕೆ ಸಂಚರಿಸುವ ಪಾಚಾಚಾರಿಗಳು ಸಂಜೆ 7 ಗಂಟೆಯ ನಂತರ ತೆರಳುವುದನ್ನು ತಡೆಯುವಂತೆ ಅಗ್ರಹ 

 ಪಾದಾಚಾರಿಗಳಿಂದ ಸ್ವಚ್ಛತೆಯನ್ನು ಕಾಪಾಡುವಂತೆ ಕರವೇ ಪ್ರವೀಣ್ ಶೆಟ್ಟಿ ಬಣ ಮನವಿ.

ಸಕಲೇಶಪುರ :, ಹಿಂದೂ ಬಾಂಧವರು ಧಾರ್ಮಿಕ ಮಣ್ಯ ಕ್ಷೇತ್ರವಾದ ಧರ್ಮಸ್ಥಳಕ್ಕೆ ಕಾಲ್ನಡುಗೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ತೆರಳುವ ವಾಡಿಕೆ ಇದ್ದು, ಈ ವರ್ಷವೂ ಸಹ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಕಾಲು ನಡುಗೆಯ ಮೂಲಕ ಹೆರಳುತ್ತಿರುವುದು ಕಂಡು ಬಂದಿರುತ್ತದೆ. ಆದರೆ ಸಕಲೇಶಮರ ತಾಲ್ಲೂಕಿನಾದ್ಯಂತ ಕಾಡಾನೆ ಮತ್ತು ಇತರೆ ಕಾಡುಪ್ರಾಣಿಗಳ ಹಾವು ಹೆಚ್ಚಾಗಿದ್ದು, ರಾತ್ರಿ ವೇಳೆಯಲ್ಲಿ ಕಾಡುಪ್ರಾಣಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ತಿರುಗಾಡುತ್ತಿರುವುದರಿಂದ, ಈ ರಸ್ತೆಯ ರಾತ್ರಿ ವೇಳೆಯಲ್ಲಿ ಸಂಚರಿಸುವ ಪಾದಾಚಾರಿಗಳಿಗೆ ಕಾಡುಪ್ರಾಣಿಗಳಿಂದ ಪ್ರಾಣಾಪಾಯವಾಗುವ ಸಂಭವ ಇರುವುದರಿಂದ, ರಾಷ್ಟ್ರೀಯ ಹೆದ್ದಾರಿ- 75ರಲ್ಲ. ಸಂಜೆ 7:00 ರ ನಂತರ ಸಂಚರಿಸುವ ಪಾದಾಚಾರಿಗಳು ಈ ರಸ್ತೆಯಲ್ಲಿ ಸಂಚರಿಸದಂತೆ ತಡೆಯುವಂತೆಯೂ ಹಾಗೂ ಈ ರಸ್ತೆಯಲ್ಲಿ ಸಂಚರಿಸುವ ಪಾದಾಚಾರಿಗಳು ಕೊಂಡೊಯ್ಯುವ ಅನುಪಯುಕ್ತ ವಸ್ತುಗಳನ್ನು ರಸ್ತೆ ಬದಿ ಎಸೆಯುತ್ತಿರುವುದರಿಂದ, ಪರಿಸರಕ್ಕೆ ಮಾರಕವಾಗುತ್ತಿರುವುದರಿಂದ, ಅರಣ್ಯ ಇಲಾಖೆಯ ಸಹಯೋಗದೊಂದಿಗೆ, ಪಾದಾಚಾರಿಗಳು ಎಸೆಯುವ ಅನುಪಯುಕ್ತ ವಸ್ತುಗಳನ್ನು ಒಂದು ನಿಗಧಿಕ ಸ್ಥಳದಲ್ಲಿ ಹಾಕುವ ವ್ಯವಸ್ಥೆ ಮಾಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ನೇತ್ರದಲ್ಲಿ ಕರವೇ ಕಾರ್ಯಕರ್ತರು ಉಪಯುವಾಗಾಧಿಕಾರಿ ಅನ್ಮೋಲ್ ಜೈನ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು 

RELATED ARTICLES
- Advertisment -spot_img

Most Popular