ಸಕಲೇಶಪುರ: ತಾಲೂಕಿನ ಹಾನು ಬಾಳು ಗ್ರಾಮ ಪಂಚಾಯತ್ ನ ಹಾದಿಗೆ ಗ್ರಾಮದಲ್ಲಿ ಮರಣ ಹೊಂದಿದೆ ಮಹಿಳೆಯೋರ್ವಳ ಶವವನ್ನು ಸ್ಮಶಾನಕ್ಕೆ ಸತ್ತ ದೇಹವನ್ನು ತರಲು ದಾರಿ ಇಲ್ಲದೆ ಪರದಾಟ ಉಂಟಾದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿ‘ಟನೆ ಮಾಡುವ ಮುಖಾಂತರ ತಾಲೂಕು ಆಡಳಿತದ ವಿರುದ್ದ ತೀವ್ರ ಆಕೊ್ರೀಷ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಹಾನುಬಾಳ್ ಹೋಬಳಿಯ ಹಾದಿಗೆ ಗ್ರಾಮದ ದೇವಿ ಎಂಬುವರು ಇಂದು ಮೃತಪಟ್ಟ ಹಿನ್ನೆಲೆಯಲ್ಲಿ ಆಕೆಯ ಶವವನ್ನು ಕುಟುಂಬಸ್ಥರು ಸ್ಮಶಾನಕ್ಕೆ ಕೊಂಡೊಯ್ಯಲು ಹೋದಾಗ ಶವವನ್ನು ತೆಗೆದುಕೊಂಡು ಹೋಗಲು ಕಾಫಿ ತೋಟದ ಮಾಲಿಕರೋರ್ವರು ಬಿಡದ ಪರಿಣಾಮ ಶವವನ್ನು ಸ್ಥಳದಲ್ಲೆ ಇಟ್ಟು ಗ್ರಾಮಸ್ಥರು ಪ್ರತಿ‘ಟನೆ ಮಾಡಿದ್ದಾರೆ. ಕೂಡಲೆ ಶವವನ್ನು ತೆಗೆದುಕೊಂಡು ಹೋಗಲು ದಾರಿ ಬಿಡದಿದ್ದಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ ಪರಿಣಾಮ ವಿಷಯ ತಿಳಿದ ತಹಸೀಲ್ದಾರ್ ಮೇಘನಾ ಆದೇಶದಂತೆ ಸ್ಥಳಕ್ಕೆ ಬಂದ ಹಾನುಬಾಳ್ ಹೋಬಳಿಯ ಕಂದಾಯ ಇಲಾಖೆಯ ಅಧಿಕಾರಿಗಳು ಒತ್ತುವರಿದಾರರ ಮನವೊಲಿಸಿ ತಾತ್ಕಾಲಿಕವಾಗಿ ಶವ ಸಂಸ್ಕಾರ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಈ ಹಿನ್ನಲೆಯಲ್ಲಿ ಇದಕ್ಕೆ ಒಪ್ಪದ ಗ್ರಾಮಸ್ಥರು ಪದೇ ಪದೇ ನಮಗೆ ತಿರುಗಾಡಲು ತೊಂದರೆಯಾಗುತ್ತಿದೆ. ಇಲ್ಲಿನ ಸ್ಮಶಾನಕ್ಕೆ ಹೋಗುವ ರಸ್ತೆಯನ್ನು ಒತ್ತುವರಿದಾರರಿಂದ ಶಾಶ್ವತವಾಗಿ ಬಿಡಿಸಿಕೊಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.