ಸಕಲೇಶಪುರ. ಮಕ್ಕಳ ಪ್ರತಿಭೆ ಅನಾವರಣ ಗೊಳಿಸಿದ ಇನಿದನಿ 2023 ಗಾಯನೋತ್ಸವ
ನಾದಸುಧಾ ಸಂಗೀತ ವಿದ್ಯಾಲಯದಿಂದ “ಇನಿದನಿ 2023” ಗಾಯನೋತ್ಸವ
ಸಕಲೇಶಪುರ: ಪಟ್ಟಣದ ಟಿ.ಎ.ಪಿ.ಸಿ.ಎಮ್.ಎಸ್ ಸಭಾಭವನದಲ್ಲಿ ಸಂಗೀತ ವಿದುಷಿ ಶ್ವೇತ ಖಂಡಿಗೆ ರವರ ನಾದಸುಧಾ ಸಂಗೀತಾ ವಿದ್ಯಾಲಯದ ವತಿಯಿಂದ ಭಾನುವಾರ ನಡೆದ ಇನಿದನಿ 2023 ವಿದ್ಯಾರ್ಥಿಗಳ ಗಾಯನೋತ್ಸವ ದಲ್ಲಿ ಸಂಭ್ರಮ ದಿಂದ ಮಕ್ಕಳು ಸಭಿಕರಿಗೆ ಗಾನ ಸುದೆ ಉಣಬಡಿಸಿದರು. ಮಕ್ಕಳ ಪ್ರತಿಭಾ ಅನಾವರಣ ಈ ಗಾಯನೋತ್ಸವ ದಲ್ಲಿ ಆಯಿತು. ಕಾರ್ಯಕ್ರಮವನ್ನು ಸಮಾಜ ಸೇವಕರಾದ ಚೆನ್ನವೇಣಿ ಎಂ ಶೆಟ್ಟಿ ರವರು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ಬೆಳೆಯುವ ಸಿರಿ ಮೊಳಕೆ ಯಲ್ಲಿ ಎಂಬ ಗಾದೆಯಂತೆ ಮಕ್ಕಳ ಪ್ರತಿಬೆ ಅನಾವರಣಕ್ಕೆ ಈ ರೀತಿಯ ಗಾಯನೋತ್ಸವ ಸಹಾಯಕಾರಿಯಾಗುತ್ತದೆ. ಈ ಕಾರ್ಯಕ್ರಮವನ್ನು ನಡೆಸುತ್ತಿರುವ ಸಂಗೀತ ವಿದೂಷಿ ಶ್ವೇತ ರವರ ಕಾರ್ಯ ಅತ್ಯಂತ ಶ್ಲಾಘನೀಯ, ಸುಮಾರು 19 ವರ್ಷ ಗಳಿಂದ ಸಕಲೇಶಪುರ ದಲ್ಲಿ ಸಂಗೀತ ಪಾಠ ಹೇಳಿಕೊಡುತ್ತಿರುವ ಶ್ವೇತ ರವರು ಪ್ರಥಮ ಬಾರಿಗೆ ಇನಿದನಿ ಗಾಯನೋತ್ಸವ ನಡೆಸುತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಪ್ರತಿಯೋರ್ವರು ಮಾಡಬೇಕು ಎಂದರು. ಗಾಯನೋತ್ಸವ ದಲ್ಲಿ ನಾದ ಸುಧಾ ಸಂಗೀತ ವಿದ್ಯಾಲಯ ವಿಧ್ಯಾರ್ಥಿಗಳು ಭಾಗವಹಿಸಿದ್ದರು ಹಾಗೂ ಕೀ ಬೋರ್ಡ್ ವಾದಕ ಹೇಮಂತ್, ತಬಲ ವಾದಕವನ್ನು ಮಂಜುನಾಥ, ಕೌಸ್ತಭ ಹಾಸನ ಇವರು ನಿರ್ವಹಿಸಿದರು.
ಈ ಸಂದರ್ಭದಲ್ಲಿ ರೋಟರಿ ಶಾಲೆಯ ಪ್ರಾಂಶುಪಾಲ ಸುಮಂತ್ ಭಾರ್ಗವ, ಟಿ.ಎ.ಪಿ.ಸಿ.ಎಂ.ಎಸ್ಟೇಟ್ ಮಾಜಿ ಅಧ್ಯಕ್ಷ ಕೌಡಹಳ್ಳಿ ಲೋಹಿತ್, ಒಲಂಪಸ್ ಶಾಲೆಯ ಮುಖ್ಯಸ್ಥೆ ಸಮಂತ ಹಾಗು ಬಾಗೆ ಜೆ ಎಸ್ ಎಸ್ ಶಾಲೆಯ ಪ್ರಾಂಶುಪಾಲ ಬಿ ಮಧು ಕುಮಾರ ಮುಂತಾದವರು ಉಪಸ್ಥಿತರಿದ್ದರು.