Wednesday, April 16, 2025
Homeಸುದ್ದಿಗಳುಸಕಲೇಶಪುರಜಾಗತಿಕ ಗ್ರಾಹಕ ಹಕ್ಕುಗಳ ಮಂಡಳಿಯ ಜಿಲ್ಲಾ ಕಾನೂನು ಅಧಿಕಾರಿಯಾಗಿ ಸಕಲೇಶಪುರದ ವಕೀಲ ಸುಧೀಶ್ ಎಸ್.ಪಿ ಆಯ್ಕೆ

ಜಾಗತಿಕ ಗ್ರಾಹಕ ಹಕ್ಕುಗಳ ಮಂಡಳಿಯ ಜಿಲ್ಲಾ ಕಾನೂನು ಅಧಿಕಾರಿಯಾಗಿ ಸಕಲೇಶಪುರದ ವಕೀಲ ಸುಧೀಶ್ ಎಸ್.ಪಿ ಆಯ್ಕೆ

ಜಾಗತಿಕ ಗ್ರಾಹಕ ಹಕ್ಕುಗಳ ಮಂಡಳಿಯ ಜಿಲ್ಲಾ ಕಾನೂನು ಅಧಿಕಾರಿ ಹಾಗೂ ಸೈಬರ್ ಅಪರಾಧ ಮತ್ತು ಕಾನೂನು ವಿಷಯದ ರಾಜ್ಯ ತರಬೇತುದಾರರಾಗಿ ಸಕಲೇಶಪುರದ ವಕೀಲ ಸುಧೀಶ್ ಎಸ್.ಪಿ ಆಯ್ಕೆ

ಸಕಲೇಶಪುರ: ಜಾಗತಿಕ ಗ್ರಾಹಕ ಹಕ್ಕುಗಳ ಮಂಡಳಿಯ (GLOB’L CHAMBER OF CONSUMER RIGHTS) ಹಾಸನ ಜಿಲ್ಲಾ ಕಾನೂನು ಅಧಿಕಾರಿಯಾಗಿ ಹಾಗೂ ಸೈಬರ್ ಅಪರಾಧ ಮತ್ತು ಕಾನೂನು ವಿಷಯದ ರಾಜ್ಯ ತರಬೇತುದಾರರಾಗಿ ಸಕಲೇಶಪುರದ ವಕೀಲ ಸುಧೀಶ್ ಎಸ್.ಪಿ ಆಯ್ಕೆಯಾಗಿರುತ್ತಾರೆ. ಜಾಗತಿಕ ಗ್ರಾಹಕ ಹಕ್ಕುಗಳ ಮಂಡಳಿಯು ಕೇಂದ್ರ ವಿತ್ತ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಸಂಸ್ಥೆಯಾಗಿದೆ. ಮಾಜಿ ಪುರಸಭಾ ಅಧ್ಯಕ್ಷ ಪರಮೇಶ್‌ರವರ ಹಿರಿಯ ಪುತ್ರರಾಗಿರುವ ಇವರು ಕಾನೂನು ಪದವಿ ಪಡೆದು ಪಟ್ಟಣದಲ್ಲಿ ಕಾನೂನು ಅಭ್ಯಾಸ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಜಾಗತಿಕ ಗ್ರಾಹಕ ಹಕ್ಕುಗಳ ಮಂಡಳಿಗೆ ಜಿಲ್ಲೆಯಿಂದ ವ್ಯಕ್ತಿಯೋರ್ವರು ಆಯ್ಕೆಯಾಗಿದ್ದಾರೆ.

RELATED ARTICLES
- Advertisment -spot_img

Most Popular