Friday, April 18, 2025
Homeಸುದ್ದಿಗಳುನಾಟಕಗಳು ಸಮಾಜವನ್ನು ಬದಲಾಯಿಸಬೇಕು: ಶಾಸಕ ಎಚ್.ಕೆ ಕುಮಾರಸ್ವಾಮಿ

ನಾಟಕಗಳು ಸಮಾಜವನ್ನು ಬದಲಾಯಿಸಬೇಕು: ಶಾಸಕ ಎಚ್.ಕೆ ಕುಮಾರಸ್ವಾಮಿ

ನಾಟಕಗಳು ಸಮಾಜವನ್ನು ಬದಲಾಯಿಸಬೇಕು: ಶಾಸಕ ಎಚ್.ಕೆ ಕುಮಾರಸ್ವಾಮಿ

ಸಕಲೇಶಪುರ : ನಾಟಕಗಳು ಸಮಾಜದ ಕೈಕನ್ನಡಿ ಹಾಗೂ ವಾಸ್ತವವನ್ನು ತೋರಿಸುವ ಮಾಧ್ಯಮವಾಗಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ಆಲೂರು‌ ತಾಲ್ಲೂಕಿನ ಕಣತೂರು ಕೂಡಿಗೆಯಲ್ಲಿ ನಡೆದ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಕುರುಕ್ಷೇತ್ರ ಪೌರಾಣಿಕ ನಾಟಕದ ಉದ್ಘಾಟಿಸಿ ಮಾತನಾಡಿ, ಸಮಾಜವನ್ನು ತಿದ್ದುವ ಕೆಲಸ ಮಾಡುತ್ತದೆ, ನೀತಿಯುಕ್ತ ಉತ್ತಮ ಸಂದೇಶ ಭರಿತ ನಾಟಕಗಳಿಂದ ಸಮಾಜದಲ್ಲಿ ಪರಿವರ್ತನೆ ಸುಧಾರಣೆಯನ್ನು ಕಾಣಲು ಸಾಧ್ಯವಿದೆ. ಅಂತಹ ನಾಟಕ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವಂತಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಲೂರು ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಮಂಜೇಗೌಡರು,ಪತ್ರಕರ್ತ ರವಿ ನಾಕಲಗೂಡು ಸೇರಿದಂತೆ ಇನ್ನಿತರರು ಇದ್ದರು

RELATED ARTICLES
- Advertisment -spot_img

Most Popular