Sunday, November 24, 2024
Homeಸುದ್ದಿಗಳುಸಕಲೇಶಪುರಬಾಳ್ಳುಪೇಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರ ಚುನಾವಣೆಗೆ ಬಿಗ್ ಟ್ವಿಸ್ಟ್ ಜೆಡಿಎಸ್ ಬೆಂಬಲಿತ ಸದಸ್ಯೆ ಉಪಾಧ್ಯಕ್ಷೆಯಾಗಲು...

ಬಾಳ್ಳುಪೇಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರ ಚುನಾವಣೆಗೆ ಬಿಗ್ ಟ್ವಿಸ್ಟ್ ಜೆಡಿಎಸ್ ಬೆಂಬಲಿತ ಸದಸ್ಯೆ ಉಪಾಧ್ಯಕ್ಷೆಯಾಗಲು ಬಿಜೆಪಿ ಸದಸ್ಯರೇ ಕಾರಣ.

ಬಾಳ್ಳುಪೇಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರ ಚುನಾವಣೆಗೆ ಬಿಗ್ ಟ್ವಿಸ್ಟ್

ಜೆಡಿಎಸ್ ಬೆಂಬಲಿತ ಸದಸ್ಯೆ ಉಪಾಧ್ಯಕ್ಷೆಯಾಗಲು ಬಿಜೆಪಿ ಸದಸ್ಯರೇ ಕಾರಣ.

ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆ ಗ್ರಾಮ ಪಂಚಾಯಿತಿಗೆ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸದಸ್ಯೆ ಶಿಲ್ಪ ಮಲ್ಲಿಕ್ ಆಯ್ಕೆಯಾಗಿದ್ದರು.

ಹಿಂದಿನ ಉಪಾಧ್ಯಕ್ಷರಾಗಿದ್ದ ರತ್ನ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದಿತ್ತು.

ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಶಿಲ್ಪ ಮಲ್ಲಿಕ್ ಕೆಲ ತಿಂಗಳ ಹಿಂದೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ನಂತರ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಾ ಜೆಡಿಎಸ್ ಪಕ್ಷಕ್ಕೆ ನಿಷ್ಠೆಯಿಂದ ನಡೆದುಕೊಳ್ಳುತ್ತಿದ್ದರು. ಆದರೆ ಸೋಮವಾರ ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ಶಿಲ್ಪ ಮಲ್ಲಿಕ್ ಜಯ ಸಾಧಿಸಲು ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯರು ಕಾರಣವಾಗಿದ್ದಾರೆ ಎಂಬ ಅಂಶ ತಿಳಿದು ಬಂದಿದೆ.

ಅದು ಹೇಗೆ ಎಂದು ತಿಳಿಯುವುದಾದರೆ, ಬಾಳ್ಳುಪೇಟೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 16 ಜನ ಸದಸ್ಯರಿದ್ದಾರೆ. ಉಪಾಧ್ಯಕ್ಷರ ಚುನಾವಣೆಗೆ ಒಟ್ಟು ಮೂರು ಜನ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಜೆಡಿಎಸ್ ಬೆಂಬಲಿತರಾಗಿ ನಿರ್ದಿಷ್ಟ ಪಂಗಡದ ಕವಿತಾ ಹಾಗೂ ಸಾಮಾನ್ಯ ವರ್ಗದಿಂದ ಶಿಲ್ಪ ಮಲ್ಲಿಕ್ ಜೊತೆಗೆ ಬಿಜೆಪಿ ಬೆಂಬಲಿತ ಸದಸ್ಯೆಯಾದ ಶಾಂತ ರವರು ಉಪಾಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು.

ಬಿಗ್ ಟ್ವಿಸ್ಟ್ ಇಲ್ಲಿದೆ ನೋಡಿ👇👇👇

ಜೆಡಿಎಸ್ ಬೆಂಬಲಿತ ಇಬ್ಬರು ಸದಸ್ಯರು ನಾಮಪತ್ರ ಸಲ್ಲಿಸಿದ್ದರು ಒಟ್ಟು ಸದಸ್ಯರಿರುವ ಸಂಖ್ಯೆ 16 ಇದರಲ್ಲಿ ಚುನಾವಣೆ ನಡೆದು ಎಂಟು ಮತಗಳನ್ನು ಕವಿತಾ ರವರು ಪಡೆದುಕೊಂಡರೆ ಉಳಿದ 8 ಮತಗಳನ್ನು ಶಿಲ್ಪ ಮಲ್ಲಿಕ್ ಅವರು ಪಡೆದುಕೊಂಡಿದ್ದಾರೆ. ಶಾಂತ ರವರು ಯಾವುದೇ ಮತ ಗಳಿಸಿಲ್ಲ. 16 ಜನ ಸದಸ್ಯರಿರುವ ಗ್ರಾಮ ಪಂಚಾಯಿತಿಯಲ್ಲಿ 12 ಜನ ಜೆಡಿಎಸ್ ಬೆಂಬಲಿತರು ಹಾಗೂ ನಾಲ್ಕು ಜನ ಬಿಜೆಪಿ ಬೆಂಬಲಿತ ಸದಸ್ಯರಿದ್ದು ಶಿಲ್ಪ ಅವರಿಗೆ ಎಂಟು ಮತಗಳು ಬರಲು ಹೇಗೆ ಸಾಧ್ಯ ಎಂಬ ಅನುಮಾನ ಕಾಡುತ್ತಿದೆ. ಚುನಾವಣೆಯ ಹಿಂದಿನ ದಿನ ಶಿಲ್ಪ ಮಲ್ಲಿಕ್ ಅವರುನ್ನು ಉಪಾಧ್ಯಕ್ಷರನ್ನಾಗಿ ಮಾಡಲು  ಬಿಜೆಪಿ ಸದಸ್ಯರು ರಾತ್ರೋರಾತ್ರಿ ಹೆಣೆದ ರಣತಂತ್ರದಿಂದ ಬಿಜೆಪಿ ಬೆಂಬಲಿತ ನಾಲ್ಕು ಸದಸ್ಯರು ಶಿಲ್ಪ ಮಲ್ಲಿಕ್ ಪರವಾಗಿ ಮತ ಚಲಾಯಿಸಿದ್ದಾರೆ

ಜೊತೆಗೆ ಉಪಾಧ್ಯಕ್ಷ ಚುನಾವಣೆ ಅಭ್ಯರ್ಥಿಯಾದ ಶಾಂತರವರು ಕೂಡ ತಮ್ಮ ಮತವನ್ನು ಕೂಡ ಇತರೆ ಅಭ್ಯರ್ಥಿಗಳಿಗೆ ಹಾಕುವ ಮೂಲಕ ತಮ್ಮ ದಾನತನವನ್ನು ಮೆರೆದಿದ್ದಾರೆ.

ಈ ಬಗ್ಗೆ ನಮ್ಮ ವಾಸ್ತವ ನ್ಯೂಸ್ ಶಿಲ್ಪ ಮಲ್ಲಿಕ್ ಅವರನ್ನು ಸಂಪರ್ಕಿಸಿದಾಗ ನಾನು ಜೆಡಿಎಸ್ ಬೆಂಬಲಿತ ಸದಸ್ಯರ ನೆರವಿನಿಂದ ಉಪಾಧ್ಯಕ್ಷೆನಾಗಿದ್ದೇನೆ ಎಂದು ತಿಳಿಸಿದ್ದರು. ಅದರಂತೆ ವಾಸ್ತವ ನ್ಯೂಸ್ ಕೂಡ ಶಿಲ್ಪ ಮಲ್ಲಿಕ್ ಅವರ ಹೇಳಿಕೆಯನ್ನು ದಾಖಲು ಮಾಡಿತ್ತು . ಆದರೆ ಸುದ್ದಿ ನೋಡಿದ ಬಿಜೆಪಿ ಬೆಂಬಲಿತ ಸದಸ್ಯರು ಅಸಮಾಧಾನ ಗೊಂಡು ವಾಸ್ತವ ನ್ಯೂಸ್ ಪ್ರತಿನಿಧಿಗೆ ಕರೆ ಮಾಡಿ ಶಿಲ್ಪ ಮಲ್ಲಿಕ್ ಅವರ ಹೇಳಿಕೆ ಸುಳ್ಳು ಉಪಾಧ್ಯಕ್ಷರಾಗಲು ಬಿಜೆಪಿ ಬೆಂಬಲ ಪಡೆದಿದ್ದಾರೆ ಆದರೆ ನೇರವಾಗಿ ಹೇಳಲು ಯಾಕೆ ಹಿಂಜರಿಕೆ ಮಾಡಿದ್ದಾರೆ ಎಂದು ಶಿಲ್ಪ ಮಲ್ಲಿಕ್ ಅವರನ್ನು ಗ್ರಾಮ ಪಂಚಾಯತಿ ಸದಸ್ಯ ಭರತ್ ಪ್ರಶ್ನಿಸಿದ್ದಾರೆ. ಬಿಜೆಪಿ ಬೆಂಬಲಿತ ಸದಸ್ಯರ ಸಹಕಾರವಿಲ್ಲದಿದ್ದರೆ ಶಿಲ್ಪ ಮಲ್ಲಿಕ್ ಅವರು ಯಾವುದೇ ಕಾರಣಕ್ಕೂ ಉಪಾಧ್ಯಕ್ಷರಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಬಾಳ್ಳುಪೇಟೆ ಗ್ರಾಮ ಪಂಚಾಯಿತಿಗೆ ಉಪಾಧ್ಯಕ್ಷೆಯಾದ ಶಿಲ್ಪ ಮಲಿಕ್ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರ ನೆರವಿನಿಂದ ಆಗಿರುವುದಂತೂ ಸತ್ಯ.

ಏನೇ ಇರಲಿ ಇದರಿಂದ ತಿಳಿಯುವುದು ಒಂದು ಅಂಶವೇನೆಂದರೆ ರಾಜಕೀಯದಲ್ಲಿ ಯಾರು ಶತ್ರುಗಳಲ್ಲ ಯಾರು ಮಿತ್ರರಲ್ಲ.

RELATED ARTICLES
- Advertisment -spot_img

Most Popular