ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಗನೂರು ಹೊಸಳ್ಳಿ ಗ್ರಾಮದಲ್ಲಿ ಹೇಮಾವತಿ ಜಾಲಾಶಯದ ವಿಶೇಷ ಅನುದಾನದಡಿ 65 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಗೆ
ಭೂಮಿಪೂಜೆ ನೆರವೇರಿಸಿ ಮಾತನಾಡಿ, ನಾನು ಪ್ರತಿನಿದಿಸುವ ಆಲೂರು ಸಕಲೇಶಪುರ, ಕಟ್ಟಾಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ದೊಡ್ಡದಾಗಿದ್ದು, ಸರಕಾರದಲ್ಲಿ ಒತ್ತಡ ತಂದು 25 ಕೋಟಿ ರೂ ವಿಶೇಷ ಅನುದಾನದ ತಂದು ಮುಳುಗಡೆ ಪ್ರದೇಶದ ಗ್ರಾಮಗಳ ರಸ್ತೆಗಳಿಗೆ 9 ಕೋಟಿ ರೂ ವೆಚ್ಚದಲ್ಲಿ 23 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮಾಡಲಾಗುತ್ರಿದೆ
ಹಾಗೂ ಇನ್ನೂ ಅನೇಕ ಕಾಮಗಾರಿಗಳಿಗೆ ಹಣವನ್ನು ನೀಡಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇವೆ. ಆದರೆ ವಿರೋಧ ಪಕ್ಷದವರು ನಮ್ಮ ಅಭಿವೃದ್ಧಿ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆ. ನಾವು ಅವರ ಮಾತಿಗೆ ಬೆಲೆ ಕೊಡುವುದಿಲ್ಲ ನನ್ನ ಕೆಲಸ ಏನೆಂದು ನಮಗೆ ಗೊತ್ತಿದೆ. ಬಿ, ಜೆ, ಪಿ ಸರ್ಕಾರ ಏನೆಂದು ಎಲ್ಲಾ ಜನರಿಗೂ ತಿಳಿದಿದೆ, ಬಿ, ಜೆ, ಪಿ ಸರ್ಕಾರದ ಜೊತೆ ಕೆಲಸ ಮಾಡುವುದು ಕಷ್ಟಸಾಧ್ಯ, ಅವನೆಲ್ಲಾ ಮೆಟ್ಟುನಿಂತು ಕೆಲಸ ಮಾಡುತ್ತಿರುವುದು ನಮ್ಮ ಜೆ, ಡಿ, ಸ್, ಪಕ್ಷ ಎಂದರು.
ಕ್ಷೇತ್ರದಲ್ಲಿ ಒಟ್ಟಾರೆ ಅಗಲ ವಿಸ್ತೀರ್ಣ ಸುಮಾರು 175 ಕಿ. ಮೀ ದೂರವಿದ್ದರೂ ನಾವು ಯಾವ ಗ್ರಾಮವನ್ನು ಕಡೆಗಣಿಸಿಲ್ಲ ಕಾರಣ ನನ್ನ ಕೆಲಸ ಇಲ್ಲಿಯ ಜನರಿಗೆ ತಿಳಿದಿದೆ.
ಹಾಗಾಗಿ ಈ ಕ್ಷೇತ್ರದಲ್ಲಿ ನನ್ನನ್ನು ಮೂರು ಬಾರಿ ಜನಪ್ರತಿನಿದಿಯಾಗಿ ಮಾಡಿ ಬೆಂಬಲಿಸಿದ್ದಾರೆ, ಮುಂದೆಯೂ ಕೂಡ ಮತ್ತೊಮ್ಮೆ ಮತ್ತೊಂದು ಬಾರಿ ಜನಪ್ರತಿನಿದಿಯನ್ನಾಗಿಸಿ ಜನರ ಸೇವೆ ಮಾಡಲು ಸಹಕರಿಸಿ ಹಾಗೂ ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚಿನ ಅಂತರದಿಂದ ಮತನೀಡಬೇಕು. ದೇವೆಗೌಡರ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಹೆಚ್ಚಿನ ಅನುದಾನವನ್ನು ಈ ಕ್ಷೇತ್ರಕ್ಕೆ ತಂದು ಇಲ್ಲಿಯ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜೆ, ಡಿ, ಸ್, ಮುಖಂಡ ಕಣದಳ್ಳಿ ಮಂಜೇಗೌಡ, ಮಲ್ಲಾಪುರ ಗ್ರಾ. ಪಂ ಅಧ್ಯಕ್ಷೆ ಕವಿತಾ,ಪಿ, ಡಿ, ಓ, ಪರಮೇಶ್, ಗ್ರಾ. ಪಂ ಮಾಜಿ ಸದಸ್ಯ ಲೋಕೇಶ್,ಜೆ, ಡಿ, ಸ್, ಮುಖಂಡರುಗಳಾದ ಕಾಂತ್ ರಾಜ್, ಅಣ್ಣೆಗೌಡ, ತನುಗೌಡ,ಇತರರಿದ್ದರು,