Saturday, April 19, 2025
Homeಕ್ರೈಮ್ಸಕಲೇಶಪುರ ಅಕ್ರಮ ಮದ್ಯ ಮಾರಾಟ: ಇಬ್ಬರ ಬಂಧನ, ಮದ್ಯ ವಶ. ವಾಟರ್ ಮ್ಯಾನ್ ಸೇರಿ...

ಸಕಲೇಶಪುರ ಅಕ್ರಮ ಮದ್ಯ ಮಾರಾಟ: ಇಬ್ಬರ ಬಂಧನ, ಮದ್ಯ ವಶ. ವಾಟರ್ ಮ್ಯಾನ್ ಸೇರಿ ಮೂವರ ಬಂಧನ.

ಸಕಲೇಶಪುರ ಅಕ್ರಮ ಮದ್ಯ ಮಾರಾಟ: ಇಬ್ಬರ ಬಂಧನ, ಮದ್ಯ ವಶ.

ವಾಟರ್ ಮ್ಯಾನ್ ಸೇರಿ ಮೂವರ ಬಂಧನ.

ಸಕಲೇಶಪುರ : ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾಲು ಸಮೇತ ಪೊಲೀಸರು ವಶಪಡಿಸಿದ್ದಾರೆ.

ಬಾಳ್ಳುಪೇಟೆ ಗ್ರಾಮ ಪಂಚಾಯತಿಯಲ್ಲಿ ವಾಟರ್ ಮ್ಯಾನ್ ಕೆಲಸ ನಿರ್ವಹಿಸುತ್ತಿದ್ದ ಓಂ ನಗರ ನಿವಾಸಿ ಶಿವಣ್ಣ,
ಚಿಕ್ಕನಾಯಕನಹಳ್ಳಿ ಗ್ರಾಮದ ಸತೀಶ ಹಾಗೂ ಯಡೇಹಳ್ಳಿ ಗ್ರಾಮದ ಸೋಮಶೇಖರ್ ಎಂಬುವರನ್ನು ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಬಸವರಾಜ್ ಅವರ ನೇತೃತ್ವದಲ್ಲಿ ಮಿಂಚಿನ ದಾಳಿ ನಡೆಸಿ ಮಾಲು ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಾಳ್ಳುಪೇಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಹಾಲಿ ಗ್ರಾಮ ಪಂಚಾಯಿತಿ ಸದಸ್ಯೆ ರತ್ನ ಅವರ ಪತಿ ಶಿವಣ್ಣನಾಗಿದ್ದು ಪೊಲೀಸರು ಈ ಹಿಂದೆ ಹಲವು ಬಾರಿ ಬಂಧಿಸಿ ಬುದ್ಧಿವಾದ ಹೇಳಿದ್ದರೂ ಕೂಡ ತನ್ನ ಚಾಳಿ ಬಿಟ್ಟಿರಲಿಲ್ಲ ಎಂದು ತಿಳಿದು ಬಂದಿದೆ.

RELATED ARTICLES
- Advertisment -spot_img

Most Popular