Friday, April 4, 2025
Homeಸುದ್ದಿಗಳುಗ್ರಾಮೀಣಸಕಲೇಶಪುರ : ರಾಷ್ತ್ರೀಯ ಹೆದ್ದಾರಿ 75 ರಲ್ಲಿ‌ ರಸ್ತೆಗೆ ಅಡ್ಡ ಬಿದ್ದ ಮರ: ಕೆಲ ಕಾಲ...

ಸಕಲೇಶಪುರ : ರಾಷ್ತ್ರೀಯ ಹೆದ್ದಾರಿ 75 ರಲ್ಲಿ‌ ರಸ್ತೆಗೆ ಅಡ್ಡ ಬಿದ್ದ ಮರ: ಕೆಲ ಕಾಲ ಸಂಚಾರ ಸ್ಥಗಿತ

ಸಕಲೇಶಪುರ : ರಸ್ತೆಗೆ ಮರ ಬಿದ್ದು ಎರಡು ತಾಸಿಗೂ ಹೆಚ್ಚು ಸಮಯ ರಾಷ್ಟ್ರೀಯ ಹೆದ್ದಾರಿ 75 ಸಂಚಾರ ಸ್ತಬ್ಧಗೊಂಡ ಘಟನೆ ತಾಲೂಕಿನ ಮಾರನಹಳ್ಳಿ ಸಮೀಪದ ರಾಜಘಟ್ಟದಲ್ಲಿ ನಡೆದಿದೆ.

  • ರಾಷ್ಟ್ರೀಯ ಹೆದ್ದಾರಿ 75 ರಾಜಘಟ್ಟದ ಬ್ಯೂಟಿ ಸ್ಪಾಟ್ ಸಮೀಪ ಅಪರಿಚಿತರು ಕಾಡಿಗೆ ಬೆಂಕಿ ಹಾಕಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಬೆಂಕಿಯ ಕಿಡಿ ಕೆಲವು ಮರಗಳಿಗೆ ತಾಗಿ ಸುಮಾರು ನಾಲ್ಕೈದು ಮರಗಳು ರಸ್ತೆಗೆ ಉರುಳಿದ್ದವು. ಈ ಸಂದರ್ಭದಲ್ಲಿ ಎರಡು ಬದಿಯ ವಾಹನಗಳು ನಿಂತು
    ಸುಮಾರು ಎರಡು ತಾಸುಗಳಿಗೂ ಹೆಚ್ಚು ಸಮಯ ಎರಡು ಬದಿಯ ವಾಹನಗಳ ಸಂಚಾರ ಸ್ತಬ್ಧಗೊಂಡವು
    ಬೆಂಕಿ ನಂದಿಸಲು ಮತ್ತು ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯವರು ಬರುವುದು ತಡವಾದ ಹಿನ್ನೆಲೆಯಲ್ಲಿ , ಸಾರ್ವಜನಿಕರು ಹಾಗೂ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು
RELATED ARTICLES
- Advertisment -spot_img

Most Popular