Saturday, April 19, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ಸ್ವಾಮಿ ದಿವ್ಯ ರಥೋತ್ಸವ ಜೆಡಿಎಸ್ ಪಕ್ಷದಿಂದ ಅನ್ನ ಸಂತರ್ಪಣೆ

ಸಕಲೇಶಪುರ ಸ್ವಾಮಿ ದಿವ್ಯ ರಥೋತ್ಸವ ಜೆಡಿಎಸ್ ಪಕ್ಷದಿಂದ ಅನ್ನ ಸಂತರ್ಪಣೆ

ಸಕಲೇಶಪುರ ಸ್ವಾಮಿ ದಿವ್ಯ ರಥೋತ್ಸವ ಜೆಡಿಎಸ್ ಪಕ್ಷದಿಂದ ಅನ್ನ ಸಂತರ್ಪಣೆ

ಸಕಲೇಶಪುರ : ಸಕಲೇಶಪುರದ ಇತಿಹಾಸ ಪ್ರಸಿದ್ಧ ಸಕಲೇಶಪುರ ಸ್ವಾಮಿ ದಿವ್ಯ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಇದೆ ವೇಳೆ ಜಾತ್ಯಾತೀತ ಜನತಾದಳದ ವತಿಯಿಂದ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಪಂಚರತ್ನ ಯಾತ್ರೆಯ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಫ್ಲೆಕ್ಸ್ ಅಳವಡಿಕೆ ಮೂಲಕ ಸಾರ್ವಜನಿಕರಿಗೆ ಜೆಡಿಎಸ್ ಕಾರ್ಯಕರ್ತರು ಮಾಹಿತಿ ನೀಡುತ್ತಿದ್ದರು.

 ಈ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ ಕವನ ಗೌಡ, ಯುವ ಘಟಕದ ಅಧ್ಯಕ್ಷ ಸಾ,ಭಾ ಭಾಸ್ಕರ್, ಜೆಡಿಎಸ್ ತಾಲೂಕು ವಕ್ತಾರರಾದ ಪ್ರಕಾಶ್, ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಬೆಕ್ಕನಹಳ್ಳಿ ನಾಗರಾಜು,ಪುರಸಭಾ ಸದಸ್ಯರಾದ ಮುಖೇಶ್ ಶೆಟ್ಟಿ , ಪ್ರಜ್ವಲ್ ಸಮೀರ್, ಮಳಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಶೆಟ್ಟಿ,ಜೆಡಿಎಸ್ ಯುವ ಮುಖಂಡ ಪ್ರಸಾದ್ ಗೌಡ,ಹೆತ್ತೂರು ಸುಮಂತ್ , ವನಗೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸತೀಶ್, ಜೆಡಿಎಸ್ ಕಾರ್ಯಕರ್ತರಾದ ವಾಸಿಮ್,ಶರೀಪ್ ಸೇರಿದಂತೆ ಮುಂತಾದವರು ಇದ್ದರು.

RELATED ARTICLES
- Advertisment -spot_img

Most Popular