ಸಕಲೇಶಪುರ :ಅಪ್ರಾಪ್ತ ಬಾಲಕಿ ಆತ್ಮಹತ್ಯೆ
ಸಕಲೇಶಪುರ: ಮನೆಯಲ್ಲಿ ಪೋಷಕರು ಬೈದರೆಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಶುಕ್ರವಾರ ಸಂತೆ ಸಮೀಪ ನಡೆದಿದೆ .
16 ವರ್ಷದ ಬಾಲಕಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು .ಕಳೆದ ಮಂಗಳವಾರ ಶಾಲೆಗೆ ಚಕ್ಕರ್ ಹೊಡೆದು ಬಾಲಕಿ ತನ್ನ ಇಬ್ಬರು ಅಪ್ರಾಪ್ತ ಸ್ನೇಹಿತರ ಜೊತೆಗೆ ಹೆತ್ತೂರು ಸಮೀಪದ ಪ್ರವಾಸಿ ತಾಣಕ್ಕೆ ಬೈಕಿನಲ್ಲಿ ಹೋಗಿದ್ದಾಳೆ .ಸಂಜೆ ಮನೆಗೆ ಬಂದಾಗ ಪೋಷಕರು ಈ ಬಗ್ಗೆ ಶಾಲೆಗೆ ಹೋಗದೆ ಪ್ರವಾಸಕ್ಕೆ ಹೋಗಿದ್ದಕ್ಕೆ ಬಾಲಕಿಗೆ ಬೈದಿದ್ದಾರೆ . ಇದಲ್ಲದೆ ಲೋಕೇಶ್ ಎಂಬಾಂತ ಬಾಲಕಿಯನ್ನು ಪ್ರೀತಿಸುತ್ತಿದ್ದು ಆತ ಬಾಲಕಿ ಇನ್ನೊಬ್ಬನ ಜೊತೆ ಬೈಕ್ ರೈಡ್ ಹೋಗಿದಕ್ಕೆ ಪ್ರಶ್ನಿಸಿದ್ದಾನೆ. ಇದರಿಂದ ಮನನೊಂದ ಬಾಲಕಿ ವಿಷ ಕುಡಿದು ಅಸ್ವಸ್ಥಗೊಂಡಾಗ ಆಕೆಯನ್ನು ಹಾಸನದ ಜಿಲ್ಲಾಸ್ಪತ್ರೆಗೆ ಬುಧುವಾರ ದಾಖಲು ಮಾಡಲಾಗಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತ ಪಟ್ಟಿದ್ದಾಳೆ. ಬಾಲಕಿ ಪ್ರೇಮಿ ಲೋಕೇಶ್ ನನ್ನು ಯಸಳೂರು ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.