ಸಕಲೇಶಪುರ : ಕಾಕನಮನೆಯಲ್ಲಿ ಕಲಿಕಾ ಹಬ್ಬಕ್ಕೆ ಚಾಲನೆ
ಕಲಿಕಾ ಚೇತರಿಕೆ ಕಾರ್ಯಕ್ರಮ ಆಯೋಜನೆಯಲ್ಲಿ ಸಕಲೇಶಪುರ ತಾಲೂಕು ಮೊದಲು.
ಸಕಲೇಶಪುರ : ಸರ್ಕಾರ ಆಯೋಜಿಸಿರುವ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಸಕಲೇಶಪುರ ತಾಲೂಕಿನಲ್ಲಿ ಅತಿ ಹೆಚ್ಚು ಯಶಸ್ವಿಯಾಗಿ ಕಲಿಕಾ ಚೇತರಿಕೆ ಕಾರ್ಯಕ್ರಮ ಆಯೋಜನೆ ಮಾಡಿದೆ.
ಈ ಕಲಿಕಾ ಚೇತರಿಕೆಯ ಹಬ್ಬವನ್ನು ಕೊನೆಯದಾಗಿ ಬೆಳಗೋಡು ಹೋಬಳಿ ಬಾಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಕನ ಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 01/01/2022 ರಿಂದ02/01/2022 ರವರೆಗೆ ನೆಡೆಯಲಿದೆ.
ಕಲಿಕಾ ಚೇತರಿಕೆಯ ಎಂದರೆ ರೋನಾದಿಂದ ವಂಚಿತರಾದ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಚೇತರಿಕೆಯ ಪುಸ್ತಕದಿಂದ ಶಾಲೆಯ ಮಕ್ಕಳು ಕಲಿತದ್ದನ್ನು 1 ಕ್ಲಸ್ಟರ್ ಮುಖಾಂತರ ಅಂದರೆ ಎರಡು ಪಂಚಾಯಿತಿಗೆ 1 ಕ್ಲಸ್ಟರ್ ಎಂಬುದಾಗಿ ನೇಮಕ ಮಾಡಿರುತ್ತಾರೆ
ಕ್ಲಸ್ಟರ್ ಗೆ ಒಬ್ಬರನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ನೇಮಕ ಮಾಡಿ ಅದರಲ್ಲಿ 60 ಗಂಡು ಮಕ್ಕಳು 60 ಹೆಣ್ಣು ಮಕ್ಕಳು ಸೇರಿ ತಾವು ಕಲಿತಿರುವುದನ್ನು ಎಲ್ಲಾ ಶಾಲೆಯ ಮಕ್ಕಳ ಮುಂದೆ ಪ್ರದರ್ಶಿಸುವುದೇ ಕಲಿಕಾ ಹಬ್ಬದ ಪ್ರಮುಖ ಉದ್ದೇಶವಾಗಿದೆ.
ಈ ಕಲಿಕಾ ಹಬ್ಬವನ್ನು ಆಯಾ ಶಾಲೆಯ ಊರಿನ ಸಾರ್ವಜನಿಕರೊಂದಿಗೆ ಹಾಗೂ ಪಂಚಾಯತಿ ಅಧ್ಯಕ್ಷರು,ಹಾಗೂ ಸದಸ್ಯರು ಸೇರಿದಂತೆ S DMC ಅಧ್ಯಕ್ಷೆ ಯವರಾದ ಸಿಂಧು, ಮತ್ತು CRP ಯವರಾದ ಜೈ ಶಂಕರ್ ಬೆಳಗುಂಬ ರವರ ಉಪಸ್ಥಿತಿಯಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಸುಲೋಚನ ರಾಮಕೃಷ್ಣ, ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಎಡೆ ಹಳ್ಳಿ ರ್ ಮಂಜುನಾಥ್ ರವರು, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ದೊರೆರಾಜ್ ,ಪರಮೇಶ್ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀನಿವಾಸ್, ರಮೇಶ್, ಎಲ್ಲಾ ಶಾಲಾ ಶಿಕ್ಷಕರು ಕಾಕನ ಮನೆ ಸಮಾಜ ಸೇವಕರಾದ ಹೆನ್ರಿ, ಮುಂತಾದ ರವರು ನಲಿ ಕಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಕನ ಮನೆ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶಿವಣ್ಣರವರ ಉಪಸ್ಥಿತಿಯಲ್ಲಿ ಕಲಿಕಾ ಚೇತರಿಕೆಯ ಕಾರ್ಯಕ್ರಮವು ಜರುಗಿತು.
ವರದಿ :ಜಾನ್ ಹೆನ್ರಿ
ಮಾಜ ಸೇವಕರು ಕಾಕನಮನೆ