ಸುಮಾರು 50 ಸಾವಿರ ವರ್ಷಗಳ ಹಿಂದೆ ಭೂಮಿಯ ಸಮೀಪ ಹಾದುಹೋಗಿದ್ದ ಹಸಿರು ಧೂಮಕೇತು ಮತ್ತೆ ಫೆ.2 ರಂದು ಭೂಮಿಯ ಸಮೀಪ ಹಾದುಹೋಗಲಿದೆ.
ನಿಯಾಂಡರ್ಥಲ್ ಮಾನವರು ಭೂಮಿ ಮೇಲೆ ವಾಸವಿದ್ದರು ಎಂದು ಹೇಳಲಾಗುವ ಸಮಯದಲ್ಲಿ ಕಳೆದ ಬಾರಿ ಹಸಿರು ಧೂಮಕೇತು ಕಾಣಿಸಿತ್ತು.
ಈ ಬಾರಿ ಭಾರತದಲ್ಲಿಯೂ ಧೂಮಕೇತು ಕಾಣಿಸಲಿದ್ದು, ಬೈನಾಕ್ಯುಲರ್ ಸಹಾಯದಿಂದ ಕಾಮೆಟ್ ವೀಕ್ಷಿಸಬಹುದಾಗಿದೆ. ಈಗಾಗಲೇ ಹಲವು ದೂರದರ್ಶಕಗಳ ಮೂಲಕ ಕಾಮೆಟ್ ಫೋಟೊ ಸೆರೆಹಿಡಿದಿದ್ದು, ಹಸಿರು ಬಾಲದಂತೆ ಕಾಮೆಟ್ ಕಾಣಿಸುತ್ತಿದೆ.
ಉತ್ತರಾರ್ಧ ಗೋಳದಲ್ಲಿ ಧೂಮಕೇತು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಪೋಲಾರಿಸ್ ಮತ್ತು ದಿ ಗ್ರೇಟ್ ಬೀರ್ ತಾರಾಪುಂಜದ ನಡುವೆ ಹಸಿರು ಧೂಮಕೇತು ಕಾಣಿಸುತ್ತಿದೆ. ಚಂದ್ರನ ಬೆಳಕಿಗೆ ಕಾಮೆಟ್ ಕಾಣಿಸುವುದಿಲ್ಲ, ಚಂದ್ರ ಮರೆಯಾಗಿ ಸೂರ್ಯ ಹುಟ್ಟುವ ಮುನ್ನ ಕಾಮೆಟ್ ನೋಡಲು ಸರಿಯಾದ ಸಮಯವಾಗಿದೆ.