ಆತ್ಮಹತ್ಯೆ ಮಾಡಿಕೊಂಡ ಸಾಗರ್ : ಪ್ರೇಯಸಯೊಡನೆ ಸಾವಿಗೂ ಮುನ್ನ ಪರಿ ಪರಿಯಾಗಿ ಬೇಡಿಕೊಂಡ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಸಕಲೇಶಪುರ: ಇತ್ತೀಚೆಗಷ್ಟೆ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡ ಪಟ್ಟಣದ ಬಾಳೆಗದ್ದೆ ಜನತಾ ಬಡಾವಣೆಯ ನಿವಾಸಿ ಸಾಗರ್ ಸಾವಿಗೂ ಮುನ್ನ ತನ್ನ ಪ್ರೇಯಸಿಯೊಡನೆ ಮಾತನಾಡಿದ ಆಡಿಯೋವನ್ನು ಪ್ರೇಯಸಿಯ ಪೋಟೋದೊಂದಿಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಮೃತ ಸಾಗರ್ ವಿಷ ಕುಡಿಯುವ ಮುನ್ನ ತನ್ನ ಪ್ರೇಯಸಿಗೆ ಕಾಲ್ ಮಾಡಿರುವ ಸಾಗರ್ ಪ್ರೇಯಸಿಗೆ ಕ್ಷಮಿಸು ಒಂದು ಚಾನ್ಸ್ ಕೊಡು ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಆದರೆ ಆತನ ಪ್ರೇಮಿಯ ಮನಸ್ಸು ಕರಗುವುದಿಲ್ಲ. ಅದಕ್ಕೆ ಪ್ರೇಯಸಿ ಇನ್ನು ಮುಂದೆ ನನಗೆ ಪೋನ್ , ಮೆಸೆಜ್ ಮಾಡಬೇಡ ಎನ್ನುತ್ತಾಳೆ. ಇದಕ್ಕೆ ಸಾಗರ್ ನೀನಿಲ್ಲದೆ ನಾನು ಇರುವುದು ಸಾಧ್ಯವಿಲ್ಲ, ಇಲ್ಲ ಸತ್ತು ಹೋಗುತ್ತೇನೆ ಅಂತಾನೆ. ಅದಕ್ಕೆ ಪ್ರೇಯಸಿ ಅದರಲ್ಲೂ ನೀನು ನನ್ನ ಹೆಸರು ತಂದು ಇಟ್ಟು ಸತ್ತೋಗು, ನೀನು ಇರುವುದೇ ನನ್ನ ಮರ್ಯಾದೆ ಹಾಳು ಮಾಡುವುದಕ್ಕೆ ಎಂದು ಹೇಳಿ ಕಾಲ್ ಕಟ್ ಆಗಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಡುಗಿ ಪ್ರೀತಿಯನ್ನು ನಿರಾಕರಿಸಿದ ಕಾರಣ ಸಾಗರ್ ವಿಷ ಕುಡಿದಿದ್ದಾನೆ. ಸಾಗರ್ ಪ್ರೇಯಸಿ ಸ್ವಲ್ಪ ಎಚ್ಚರ ವಹಿಸಿದ್ದರೆ ಸಾಗರ್ ಪ್ರಾಣ ಉಳಿಸಬಹುದಾಗಿದ್ದು. ಒಟ್ಟಾರೆಯಾಗಿ ಓದುವ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಹುಚ್ಚಿಗೆ ಸಾಗರ್ ತನ್ನ ಜೀವ ಕಳೆದುಕೊಂಡಿದ್ದಾನೆ.