ಸಕಲೇಶಪುರ : ಹೆತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ವಿಭಾಗಿಯ ಮಟ್ಟದಲ್ಲಿ ದ್ವಿತಿಯ ಸ್ಥಾನ.
ಗಮನ ಸೆಳೆದ ಕಾಡಾನೆ -ಮಾನವ ಸಂಘರ್ಷ ಕುರಿತಾದ ಪ್ರಾಜೆಕ್ಟ್ .
ಸಕಲೇಶಪುರ : ಕರ್ನಾಟಕ ವಸತಿ ಶಿಕ್ಷಣ ಸಂಘಗಳ ಸಂಘ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ವಿಜ್ಞಾನ ಮೇಳ 2023 ಕಾರ್ಯಕ್ರಮದಲ್ಲಿ ಹೆತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ರಾಜ್ಯಮಟ್ಟದ ವಿಜ್ಞಾನ ಮೇಳದಲ್ಲಿ ವಿಭಾಗಿಯ ಮಟ್ಟದಲ್ಲಿ ದ್ವಿತಿಯ ಸ್ಥಾನವನ್ನು ಪಡೆದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕರ್ನಾಟಕ ವಸತಿ ಶಿಕ್ಷಣ ಸಂಘಗಳ ಸಂಘ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರಾಜ್ಯದಲ್ಲಿ ಪ್ರಪ್ರಥಮವಾಗಿ ಆಯೋಜಿಸಿರುವ ರಾಜ್ಯ ಮಟ್ಟದ ವಿಜ್ಞಾನ ಮೇಳ 2023 ದಲ್ಲಿ ರಾಜ್ಯದ ವಿವಿಧ ವಸತಿ ಶಾಲೆಗಳ ವಿದ್ಯಾರ್ಥಿಗಳು ಹಲವು ಮಾದರಿಗಳ ವಿಜ್ಞಾನ ಮಾದರಿಗಳನ್ನು ಆಕರ್ಷಕವಾಗಿ ಪ್ರದರ್ಶಿಸಿದರು ಎಂದು ಶಾಲೆಯ ಪ್ರಾಂಶುಪಾಲರಾದ ಶಾಂತಿಯವರು ವಾಸ್ತವ ನ್ಯೂಸಿಗೆ ತಿಳಿಸಿದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ವಿಜ್ಞಾನ ಮಾದರಿಗಳಲ್ಲಿ ಹಲವಾರು ಮಾದರಿಗಳನ್ನು ವಿಷೇಶವಾಗಿ ಮಾಡಿದ್ದರು ಬಯೋಗ್ಯಾಸ್ , ಆಧುನಿಕ ಕೃಷಿ ವಿಧಾನ, ವಿದ್ಯುತ್ ಕಳವು ನಿಯಂತ್ರಣ, ಕೃಷಿ ವಿಧಾನದಲ್ಲಿ ತಾಂತ್ರಿಕವಾಗಿ ನೀರು ಸದ್ಬಳಕೆ, ರೊಬೋಟ್ ಗೆ ಸಂಬಂಧಿಸಿದ ತಂತ್ರಜ್ಞಾನ, ರಸ್ತೆ ಸುರಕ್ಷತೆ, ನೈಸರ್ಗಿಕ ತಂಪು, (ನ್ಯಾಚುರಲ್ ಎಸಿ), ಸೆನ್ಸಾರ್ ಬೀದಿ ದೀಪ,ಅಂಗವಿಕಲರಿಗೆ ಸೆನ್ಸಾರ್ ಸ್ಟಿಕ್, ಅನೇಕ ವಿಜ್ಞಾನ ಮಾದರಿಗಳು ಪ್ರಸ್ತುತಪಡಿಸಿದ್ದರು, ಹೆತ್ತೂರು ಶಾಲೆಯ ಮಕ್ಕಳು ಸೆನ್ಸಾರ್ ತಂತ್ರಜ್ಞಾನದ ಮೂಲಕ ಕಾಡಾನೆ ಮತ್ತು ಮಾನವ ಸಂಘರ್ಷ ಕಡಿಮೆ ಮಾಡುವ ಪರಿಕಲ್ಪನೆಯ ಕುರಿತು ಪ್ರಾಜೆಕ್ಟ್ ನ್ನು ಅಭಿವೃದ್ಧಿ ಪಡಿಸಿದ್ದರು. ಇದಕ್ಕೆ ವಿಬಾಗಿಯ ಮಟ್ಟದಲ್ಲಿ ದ್ವಿತೀಯ ಸ್ತಾನ ಲಬಿಸಿದೆ ಎಂದರು