ಸಕಲೇಶಪುರ :ಪೋಲಿಸ್ ಇಲಾಖೆ ಹಾಗೂ ಪತ್ರಕರ್ತರ ನಡುವೆ ಸಂವಾದ ಕಾರ್ಯಕ್ರಮ
ಸಕಲೇಶಪುರ: ಪತ್ರಕರ್ತರ ರಕ್ಷಣೆಗೆ ಸದಾ ಪೋಲಿಸ್ ಇಲಾಖೆ ಬದ್ದವಾಗಿದೆ ಎಂದು ಡಿ.ವೈ.ಎಸ್.ಪಿ ಮಿಥುನ್ ಹೇಳಿದರು.
ಪಟ್ಟಣದ ಲಯನ್ಸ್ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತರು ಹಾಗೂ ಪೋಲಿಸ್ ಇಲಾಖೆ ನಡುವಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಪತ್ರಕರ್ತರು ಹಾಗೂ ಪೋಲಿಸ್ ಇಲಾಖೆ ನಡುವೆ ಉತ್ರಮ ಬಾಂದವ್ಯ ಇದ್ದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಹಾಗೂ ಪೋಲಿಸ್ ಇಲಾಖೆ ನಡುವೆ ಉತ್ತಮ ಸಂಭಂದವಿರಬೇಕೆಂದು ಈ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ಸಂಧರ್ಭದಲ್ಲಿ ಪತ್ರಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ನಗರಠಾಣೆ ಪಿ.ಎಸ್.ಐ ಶಿವಶಂಕರ್, ಗ್ರಾಮಾಂತರ ಠಾಣೆಯ ಪಿ.ಎಸ್.ಐ ಬಸವರಾಜ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈಭೀಮ್ ಮಂಜುನಾಥ್, ಕಾರ್ಯದರ್ಶಿ ದಯಾನಂದ್ , ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಟಿ.ಪಿ ಕೃಷ್ಣಪ್ಪ, ಕಾರ್ಯದರ್ಶಿ ಬೈರಪ್ಪ ಮುಂತಾದವರು ಹಾಜರಿದ್ದರು.