ಸುಣ್ಣ ಬಣ್ಣ ಕಾಣದ ಸೇತುವೆಗೆ ಸುಣ್ಣ ಬಣ್ಣ ಬಳಿಯುವ ಮುಖಾಂತರ ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ ಆಚರಿಸಿದ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು.
ಸಕಲೇಶಪುರ: ಸುಣ್ಣ ಬಣ್ಣ ಕಾಣದ ಪಟ್ಟಣದ ಹೇಮಾವತಿ ಸೇತುವೆಗೆ ಸ್ವಯಂಪ್ರೇರಿತರಾಗಿ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ದಿನವಿಡಿ ಶ್ರಮ ದಾನ ಮಾಡಿ ಸುಣ್ಣ ಬಣ್ಣ ಬಳಿಯುವ ಮುಖಾಂತರ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮಾದರಿ ಆಗಿದ್ದಾರೆ. ಸಕಲೇಶ್ವರಸ್ವಾಮಿ ಜಾತ್ರೆ ಹಿನ್ನೆಲೆಯಲ್ಲಿ ಊರಿನ ಪ್ರವೇಶದ್ವಾರದಲ್ಲಿನ ಹೇಮಾವತಿ ಸೇತುವೆಗೆ ಪುರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಸ್ಥಳೀಯ ಜನಪ್ರತಿನಿಧಿಗಳು ಸೇತುವೆಗೆ ಸುಣ್ಣಬಣ್ಣ ಮಾಡಿಸಲು ಮುಂದಾಗದ ಕಾರಣ ಕರವೇ ಸ್ವಾಭಿಮಾನಿ ಸೇನೆಯ ತಾಲೂಕು ಅಧ್ಯಕ್ಷ ಜಾನೆಕೆರೆ ಸಾಗರ್ ನೇತೃತ್ವದಲ್ಲಿ ಕಾರ್ಯಕರ್ತರು ಸೇತುವೆಗೆ ಸುಣ್ಣ ಬಣ್ಣ ಬಳಿಯುವ ಮುಖಾಂತರ ಉತ್ತಮ ಕೆಲಸ ಮಾಡಿದ್ದಾರೆ. ಇವರ ಈ ಕೆಲಸಕ್ಕೆ ಕಾಂಗ್ರೆಸ್ ಮುಖಂಡ ಡಿ.ಮಲ್ಲೇಶ್ ಸುಣ್ಣ ಬಣ್ಣದ ಸಂಪೂರ್ಣ ವೆಚ್ಚವನ್ನು ಭರಿಸಿದ್ದಾರೆ.