ಕಸ ವಿಲೇವಾರಿ ಸಮಸ್ಯೆ: ಪುರಸಭಾ ವಿರುದ್ದ ಅಹೋರಾತ್ರಿ ಪ್ರತಿಭಟನೆ ಹಿಂಪಡೆದ ಕನ್ನಡ ಪರ ಸಂಘಟನೆಗಳು
ಸಕಲೇಶಪುರ : ಕಸ ವಿಲೇವಾರಿ ಮಾಡುವರೆಗೂ ಪ್ರತಿಭಟನೆ ಹಿಂಪಡೆಯುದಿಲ್ಲವೆಂದು ಆರ್ಭಟಿಸಿದ್ದ ಕನ್ನಡ ಪರ ಸಂಘಟನೆಗಳ ಹೋರಾಟ ರಾತ್ರಿ ವೇಳೆಗೆ ಠುಸ್ಸಾಯಿತು.
ಬೆಳಿಗ್ಗೆಯಿಂದ ಸಂಜೆಯವರೆಗೆ ಪುರಸಭೆಯವರು ಕಸ ವಿಲೇವಾರಿ ಮಾಡುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಅಹೋರಾತ್ರಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಘರ್ಜಿಸಿದ್ದ ಪ್ರತಿಭಟನಕಾರರು ಪುರಸಭೆಯ ಅಧ್ಯಕ್ಷ ಕಾಡಪ್ಪ, ಮುಖ್ಯಾಧಿಕಾರಿ ಮಂಜುನಾಥ್, ಪುರಸಭಾ ಸದಸ್ಯರುಗಳಾದ ಮುಖೇಶ್, ಸಮೀರ್ ರವರುಗಳ ಒತ್ತಾಯಕ್ಕೆ ಮಣಿದ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದಿದ್ದರಿಂದ ಪುರಸಭೆಯ ಆಡಳಿತ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು.