ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ ಗೊರೂರು ವೆಂಕಟೇಶ್ ಬಿಜೆಪಿ ಸೇರ್ಪಡೆ
ಸಕಲೇಶಪುರ: ಕಾಂಗ್ರೆಸ್ ನಿಂದ ಟಿಕೇಟ್ ಪ್ರಬಲ ಟಿಕೇಟ್ ಅಕಾಂಕ್ಷಿಯಾಗಿದ್ದ ಗೊರೂರು ವೆಂಕಟೇಶ್ ಕಾಂಗ್ರೆಸ್ ಟಿಕೇಟ್ ಖಾತ್ರಿಯಾಗದ ಹಿನ್ನಲೆಯಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಸಕಲೇಶಪುರದ ಬಿಜೆಪಿ ಕಚೇರಿಗೆ ಮಂಗಳವಾರ ಭೇಟಿ ನೀಡಿ ಪಕ್ಷದ ಮುಖಂಡರೊಡನೆ ಚರ್ಚಿಸಿದ್ದು ಬುಧವಾರ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಕುರಿತು ವಾಸ್ತವ ನ್ಯೂಸ್ ನೊಂದಿಗೆ ಮಾತನಾಡಿ ಕಾಂಗ್ರೆಸ್ ಟಿಕೇಟ್ ಅಕಾಂಕ್ಷಿಯಾಗಿದ್ದು ನಿಜ, ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ ಎಂದಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಬಿಜೆಪಿ ಹೈಕಮಾಂಡ್ ಯತ್ನಿಸುತ್ತಿದ್ದು ಈ ಹಿನ್ನೆಲೆಯಲ್ಲಿ ದಲಿತ ಜನಾಂಗಕ್ಕೆ ಸೇರಿರುವ ಗೊರೂರು ವೆಂಕಟೇಶ್ ರವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಸಕಲೇಶಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಟ್ಟಾಯ ಭಾಗದಲ್ಲಿರುವ ಒಕ್ಕಲಿಗ ಮತಗಳನ್ನು ಹಾಸನದ ಶಾಸಕ ಪ್ರೀತಮ್ ಗೌಡ ಸೆಳೆದರೆ ದಲಿತರ ಮತಗಳನ್ನು ಗೊರೂರು ವೆಂಕಟೇಶ್ ಮುಖಾಂತರ ಸೆಳೆಯಬಹುದೆಂಬ ಲೆಕ್ಕಚಾರವನ್ನು ಬಿಜೆಪಿ ಹೈಕಮಾಂಡ್ ಹಾಕಿದ್ದು ಆದರೆ ಅವರಿಗೆ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಟಿಕೇಟ್ ನೀಡುವ ಬಗ್ಗೆ ಯಾವುದೆ ಆಶ್ವಾಸನೆಯನ್ನು ಬಿಜೆಪಿ ಹೈಕಮಾಂಡ್ ನೀಡಿರುವುದಿಲ್ಲ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ , ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಜೆ ಗೌಡ ಸೇರಿದಂತೆ ಇನ್ನಿತರರಿದ್ದರು