ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ನಡೆದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಜೆ ಎಸ್ ಎಸ್ ಫ್ರೌಢಶಾಲೆಯ ನೈದಿಲ್ ಬ್ರಹ್ಮ ಪ್ರಥಮ ಸ್ಥಾನ ಪಡೆದಿದ್ದಾನೆ.
ಈತ ಸಕಲೇಶಪುರದ ಸಂತ ಜೋಸೆಫರ ಶಾಲೆಯ ಶಿಕ್ಷಕ ಕೀರ್ತಿಕುಮಾರ್ ಹಾಗೂ ಸ.ಹಿ.ಪ್ರಾ.ಶಾಲೆ ಅಗ್ರಹಾರದ ಶಿಕ್ಷಕಿ ಅನಿತಕುಮಾರಿ ಅವರ ಪುತ್ರ.
ನೈದಿಲ ಬ್ರಹ್ಮ ಈಗಾಗಲೇ ಜಿಲ್ಲಾ ಹಂತದಲ್ಲಿ ನಡೆದ ಹಲವಾರು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನ ಹಾಗೂ ಪ್ರಶಂಸನಾ ಪತ್ರ ಪಡೆದಿದ್ದು…ಇಂದು ಜಿಲ್ಲಾ ಹಂತದಲ್ಲಿ ನಡೆದ ಮತದಾರರ ದಿನಾಚರಣೆಯ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ಅರ್ಚನಾ.ಮುಖ್ಯಕಾರ್ಯನಿರ್ವಣಾಧಿಕಾರಿ ಕಾಂತರಾಜ್.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಹರಿರಾಂ ಶಂಕರ್ ರವರು ನೈದಿಲ್ ಬ್ರಹ್ಮನನ್ನು ಗೌರವಿಸಿ ಪ್ರಶಂಶಿಸಿದರು.
ಸಕಲೇಶಪುರದ ತಾಲೂಕು ಕಚೇರಿಯಲ್ಲೂ ಈ ವಿದ್ಯಾರ್ಥಿಯನ್ನು ಗೌರವಿಸಲಾಯಿತು.