Monday, April 21, 2025
Homeಸುದ್ದಿಗಳುಸಕಲೇಶಪುರಸಕಲೇಶಪುರದ ಮಿನಿವಿಧಾನಸೌದದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

ಸಕಲೇಶಪುರದ ಮಿನಿವಿಧಾನಸೌದದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

ಸಕಲೇಶಪುರ: ರಾಷ್ಟ್ರೀಯ ಮತದಾರರ ದಿನವನ್ನು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಆಚರಿಸಲಾಯಿತು.

ಪಟ್ಟಣದ ಮಿನಿ ವಿಧಾನಸೌದಲ್ಲಿ ನಡೆದ ಕಾರ್ಯಕ್ರಮವನ್ನು ತಹಸೀಲ್ದಾರ್ ಮೇಘನಾ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಪ್ರತಿ ವರ್ಷ ಭಾರತದಲ್ಲಿ ಜನವರಿ 25 ರಂದು ಆಚರಣೆ ಮಾಡಲಾಗುತ್ತದೆ. 1950 ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನ ದಿನದ ನೆನಪಿಗಾಗಿ ಈ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. 2011 ರಲ್ಲಿ ಮೊದಲ ಬಾರಿಗೆ ದೇಶಾದ್ಯಂತ ರಾಷ್ಟ್ರೀಯ ಮತದಾರರ ದಿನವನ್ನು ಆಚರಣೆ ಮಾಡಲಾಯಿತು ಎಂದರು.ಇದೇ ಸಂಧರ್ಭದಲ್ಲಿ ಪಟ್ಟಣದ ಪ್ರಮುಖ‌ ಬೀದಿಗಳಲ್ಲಿ ಜಾಗೃತಿ ಜಾಥ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಣಾಧಿಕಾರಿ, ವೆಂಕಟೇಶ್, ಪುರಸಭ ಮುಖ್ಯಾಧಿಕಾರಿ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಶಿರಸ್ತೇದಾರ್‌ಗಳಾದ ಉಮೇಶ್, ಶ್ವೇತ, ಕಂದಾಯ ರಾಜಸ್ವ ನಿರೀಕ್ಷರಾದ ಸುರೇಶ್ ಇನ್ನಿತರರು ಇದ್ದರು

RELATED ARTICLES
- Advertisment -spot_img

Most Popular