ಸಕಲೇಶಪುರ: ಮುಂಬರುವ ಸಕಲೇಶ್ವರ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಅನ್ಯ ಧರ್ಮೀಯರ ವ್ಯಾಪಾರಕ್ಕೆ ನಿರ್ಬಂಧ ಹೇರಬೇಕೆಂದು ಆಗ್ರಹಿಸಿ ತಾಲೂಕು ಭಜರಂಗದಳ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ ನಂತರ ಸಕಲೇಶ್ವರಸ್ವಾಮಿರವರ ರಥೋತ್ಸವ ಮುಂಬರುವ ಫೆಬ್ರವರಿ 5 ಹಾಗೂ 6 ರಂದು ನಡೆಯಲಿದ್ದು ಈ ರಥೋತ್ಸವದ ಹಿನ್ನೆಲೆಯಲ್ಲಿ ಹಿಂಧೂ ಧಾರ್ಮಿಕ ದತ್ತಿ ನಿಯಮದಂತೆ ಅನ್ಯಧರ್ಮೀಯರಿಗೆ ದೇವಸ್ಥಾನದ ಆವರಣದಲ್ಲಿ ಪೂಜಾ ಸಾಮಾಗ್ರಿ ,ಆಹಾರ ಸೇರಿದಂತೆ ಇತರ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಬಾರದೆಂದು ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ವಿ.ಎಚ್.ಪಿ ಮುಖಂಡ ಮಂಜು ಕಬ್ಬಿನಗದ್ದೆ,ಭಜರಂಗದಳ ಮುಖಂಡರುಗಳಾದ ಕೌಶಿಕ್, ಮನು,ಪ್ರತಾಪ್, ದೀಪು ಮುಂತಾದವರು ಹಾಜರಿದ್ದರು.