Monday, April 21, 2025
Homeಸುದ್ದಿಗಳುಚಂಗಡಿಹಳ್ಳಿ -ಹೊಸೂರು ಗ್ರಾಮದಲ್ಲಿ ಬೂತ್ ಮಟ್ಟದ ವಿಜಯ ಸಂಕಲ್ಪ ಅಭಿಯಾನಕ್ಕೆ ಸಿಮೆಂಟ್ ಮಂಜುನಾಥ್ ಚಾಲನೆ.

ಚಂಗಡಿಹಳ್ಳಿ -ಹೊಸೂರು ಗ್ರಾಮದಲ್ಲಿ ಬೂತ್ ಮಟ್ಟದ ವಿಜಯ ಸಂಕಲ್ಪ ಅಭಿಯಾನಕ್ಕೆ ಸಿಮೆಂಟ್ ಮಂಜುನಾಥ್ ಚಾಲನೆ.

ಚಂಗಡಿಹಳ್ಳಿ -ಹೊಸೂರು ಗ್ರಾಮದಲ್ಲಿ ಬೂತ್ ಮಟ್ಟದ ವಿಜಯ ಸಂಕಲ್ಪ ಅಭಿಯಾನಕ್ಕೆ ಸಿಮೆಂಟ್ ಮಂಜುನಾಥ್ ಚಾಲನೆ.

ಸಕಲೇಶಪುರ : ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಜನವರಿ 21ರಿಂದ 29ರ ವರೆಗೆ ಬೂತ್‌ ಮಟ್ಟದ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ ಎಂದು ಸಕಲೇಶಪುರ, ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್ ತಿಳಿಸಿದರು.

ಈ ಅವಧಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವಾರು ಯೋಜನೆಗಳ ಮಾಹಿತಿಯನ್ನು ಮನೆ ಮನೆಗೆ ತಲುಪಿಸಲಾಗುವುದು. ʻಬಿಜೆಪಿಯೇ ಭರವಸೆ, ಮತ್ತೊಮ್ಮೆ ಬಿಜೆಪಿ’ ಘೋಷವಾಕ್ಯದ ಈ ಅಭಿಯಾನ ನಡೆಯಲಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಸಾಧನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವುದು ಇದರ ಉದ್ದೇಶ ಎಂದು ಹೇಳಿದರು.ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌, ವಸತಿ ಯೋಜನೆ, ಜಲ್‌ ಜೀವನ್‌ ಮಿಷನ್‌ ಹೀಗೆ ಯಾವುದೇ ಯೋಜನೆ ತೆಗೆದುಕೊಂಡರೂ ಬಿಜೆಪಿ ಜನಮುಖಿಯಾಗಿ ಕೆಲಸ ಮಾಡಿದೆ. ಸಮಾಜದ ಎಲ್ಲಾ ವರ್ಗಗಳಿಗೂ ಇದನ್ನು ತಲುಪಿಸಿ ತಾಲೂಕಿನ ಎಲ್ಲಾ ಭಾಗದಲ್ಲೂ ಪಕ್ಷವನ್ನು ವಿಸ್ತರಿಸಲಾಗುವುದು ಎಂದರು.

ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ತಾಲೂಕು ಉಪಾಧ್ಯಕ್ಷ ಪುಟ್ಟಸ್ವಾಮಿ, ಸವಿನ್, ರಾಜಣ್ಣ ಸೇರಿದಂತೆ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರಿದ್ದರು.

RELATED ARTICLES
- Advertisment -spot_img

Most Popular