ಸಕಲೇಶಪುರ: ಯಸಳೂರಿನ ಶ್ರೀ ತೆಂಕಲಗೂಡು ಬೃಹನ್ಮಠದ ಪೂಜನೀಯ ಶ್ರೀ ಶ್ರೀ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಇಂದು ಬಜರಂಗದಳ ಮುಖಂಡ ರಘು ಸಕಲೇಶಪುರ ಮನೆಗೆ ಭೇಟಿ ನೀಡಿದರು. ಬಜರಂಗದಳ ರಾಜ್ಯ ಜವಾಬ್ದಾರಿಗೆ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಹಿಂದೂ ಸಂಘಟನೆಗಳಿಗೆ ನಿಮ್ಮಂತ ಯುವ ಮುಖಂಡರು ಅವಶ್ಯಕತೆ ಇದೆ. ರಾಜ್ಯದಲ್ಲಿ ನಿಮ್ಮ ಮಾರ್ಗದರ್ಶನದಲ್ಲಿ ಹಿಂದೂ ಯುವ ಸಂಘಟನೆ ಬಲಿಷ್ಠವಾಗಿದೆ ಎಂದು ನನ್ನ ಆಪ್ತರು ಮಾಹಿತಿ ನೀಡಿದ್ದಾರೆ.ನಿಮ್ಮ ಈ ನಿರ್ಧಾರದಿಂದ ನಿಮ್ಮ ಕಾರ್ಯಕರ್ತರಿಗೆ ಅಲ್ಲದೆ ಇಡೀ ಹಿಂದೂ ಸಮಾಜಕ್ಕೆ ನಷ್ಟವಾಗಿದೆ. ದಯವಿಟ್ಟು ನಿಮ್ಮ ನಿವೃತ್ತಿ ನಿರ್ಧಾರವನ್ನು ಬದಲಾಯಿಸಿ ನಾವು ನಿಮ್ಮೊಂದಿಗೆ ಸದಾ ಇದ್ದೇವೆ. ಹಿಂದೂ ಸಮಾಜಕ್ಕೆ ಮರಳಿ ಮಾರ್ಗದರ್ಶನ ಮಾಡಬೇಕೆಂದು ಆಶೀರ್ವಾದಿಸಿದರು.
ಈ ಸಂಧರ್ಭದಲ್ಲಿ ಭಜರಂಗದಳ ಮುಖಂಡರುಗಳಾದ ಕೌಶಿಕ್ ,ಶಿವು,ಮನು ಮುಂತಾದವರು ಹಾಜರಿದ್ದರು.
ತಾಜಾ ಸುದ್ದಿ