ಸಕಲೇಶಪುರ ಅರ್ಥ ಪೂರ್ಣವಾಗಿ ನೆಡೆದ ಶಿವಕುಮಾರ ಸ್ವಾಮಿಗಳ ದಾಸೋಹ ದಿನ ಹಾಗೂ ನಾಲ್ಕನೇ ಪುಣ್ಯ ಸ್ಮರಣೆ ಕಾರ್ಯಕ್ರಮ.
ವೀರಶೈವ ಲಿಂಗಾಯತ ಯುವ ಸೇನೆಯಿಂದ ಕಾರ್ಯಕ್ರಮ ಆಯೋಜನೆ.
ಕಿರೆಕೊಡ್ಲಿ ಹಾಗೂ ತೆಂಕಲಗೂಡು ಶ್ರೀಗಳಿಂದ ಆಶೀರ್ವಾಚನ
ಸಕಲೇಶಪುರ : ನೆಡೆದಾಡುವ ದೇವರು, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಸಿದ್ದಗಂಗಾ ಪೀಠಧ್ಯಾಕ್ಷರಾದ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮಿಗಳ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ವೀರಶೈವ ಯುವ ಸೇನೆಯಿಂದ ಆಚರಿಸಲಾಯಿತು.
ಶನಿವಾರ ಪಟ್ಟಣ ಹಳೆ ಬಸ್ ನಿಲ್ದಾಣ ಸಮೀಪ ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪರ್ಚನೆ ನೆಡೆಸಿ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಕಿರೆಕೊಡ್ಲಿ ಮಠದ ಸದಾಶಿವ ಸ್ವಾಮಿಗಳು ಹಾಗೂ ತೆಂಕಲಗೂಡು ಮಠದ ಚನ್ನಸಿದ್ದೇಶ್ವರ ಸ್ವಾಮಿಗಳು ಕಾರ್ಯಕ್ರಮದ ಸಾನಿದ್ಯ ವಹಿಸಿ ಜನರಿಗೆ ಆಶೀರ್ವಾಚನ ನೀಡಿದರು.
ಶಿವಕುಮಾರ ಸ್ವಾಮಿಗಳ ಲಿಂಗಕ್ಯ ದಿನವನ್ನು ರಾಜ್ಯ ಸರ್ಕಾರ ದಾಸೋಹ ದಿನವನ್ನಾಗಿ ಆಚರಿಸಲು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ವೀರಶೈವ ಯುವ ಸೇನೆ ವತಿಯಿಂದ ಸುಮಾರು 4000 ಜನರಿಗೆ ಅನ್ನ ದಾಸೋಹ ಏರ್ಪಡಿಸಲಾಗಿದೆ.
ಈ ಸಂಧರ್ಭದಲ್ಲಿ ವೀರಶೈವ ಯುವ ಸೇನೆಯ ತಾಲೂಕು ಅಧ್ಯಕ್ಷ ಸಾಗರ್ ಜಾನೇಕೆರೆ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರಿದ್ದರು.