ಸಕಲೇಶಪುರ : ಕ್ರೈಸ್ತ ಸಮಾಜದಿಂದ ಶಾಸಕ ಎಚ್ ಕೆ ಕುಮಾರಸ್ವಾಮಿ ಭೇಟಿ.
ಬಾಳ್ಳುಪೇಟೆ ನಿರ್ಮಾಣವಾಗುತ್ತಿರುವ ಚರ್ಚ್ ಗೆ ಅನುದಾನ ಒದಗಿಸುವಂತೆ ಮನವಿ.
ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ಸಾಕ್ರಿಟ್ ಆರ್ಟ್ ಚರ್ಚ್ ನಿರ್ಮಾಣಕ್ಕೆ ಅನುದಾನ ಒದಗಿಸಿ ಕೊಡುವಂತೆ ಶಾಸಕ ಎಚ್ ಕೆ ಕುಮಾರಸ್ವಾಮಿ ಅವರಿಗೆ ಕ್ರೈಸ್ತ ಸಮಾಜದಿಂದ ಮನವಿ ಮಾಡಲಾಯಿತು.
ಶುಕ್ರವಾರ ಬಾಳ್ಳುಪೇಟೆಯ ಜೆಪಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಚರ್ಚ್ ಅರ್ಧದಷ್ಟು ಕಾಮಗಾರಿ ಮುಗಿದಿದ್ದು ಉಳಿದರ್ದ ಕಾಮಗಾರಿಗೆ ಶಾಸಕರು ಅನುದಾನ ಒದಗಿಸಿಕೊಡುವಂತೆ ಜೆಡಿಎಸ್ ಯುವ ಮುಖಂಡ ಉದೀಶ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಚರ್ಚ್ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ತೆರಳಿ ಕಾಮಗರಿಯನ್ನು ವೀಕ್ಷಿಸಿದ ನಂತರ ಮಾತನಾಡಿದ ಶಾಸಕ ಎಚ್ ಕೆ ಕುಮಾರಸ್ವಾಮಿ, ಚರ್ಚ್ ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಕ್ರೈಸ್ತ ಸಮಾಜದವರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಫಾದರ್ ಜಾನ್ ಪಾಲ್,ಲೂಯಿಸ್ ಅನಿಲ್,ಅಬಿನ್ ಮನು, ಲಿಜೂ,ಜೋಯಿ,ಫಿಲಿಫ, ಗ್ರಾಮ ಪಂಚಾಯತಿ ಸದಸ್ಯ ರೋಹಿತ್ ಸೇರಿದಂತೆ ಮುಂತಾದವರಿದ್ದರು.