ಬಾಳ್ಳುಪೇಟೆ :ಚಿರತೆ ಮರಿ ಸಾವು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳ ಭೇಟಿ ಪರಿಶೀಲನೆ.
ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆ ಸಮೀಪ ರಾಷ್ಟ್ರೀಯ 75ರಲ್ಲಿ ಅಪರಿಚಿತ ವಾಹನಕ್ಕೆ ಚಿರತೆ ಮರಿ ಎಂದು ಸಿಲುಕಿ ಸಾವಿಗೀಡಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಇಂದು ಬೆಳಗ್ಗೆ ಸ್ಥಳೀಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮೃತಪಟ್ಟ ಸ್ಥಿತಿಯಲ್ಲಿ ಚಿರತೆ ಮರಿ ಪತ್ತೆಯಾಗಿದ್ದು ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದರು.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಇದು ಚಿರತೆ ರೀತಿಯ ಕಂಡುಬರುವ ಚಿರತೆ ಬೆಕ್ಕು ಎಂದು ಗುರುತಿಸಿದ್ದಾರೆ.
ಚಿರತೆ ಮರಿ ಸಾವನ್ನಪ್ಪಿರುವುದರಿಂದ ಚಿರತೆ ಮರಿಯ ತಾಯಿ ಇಲ್ಲಿಯೇ ಇರಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ.