Monday, April 21, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಎರಡು ದಿನಗಳಲ್ಲಿ ಜಾತ್ರೆ ಮೈದಾನ ಕಸದಿಂದ ಮುಕ್ತ; ಪುರಸಭ ಅಧ್ಯಕ್ಷ ಕಾಡಪ್ಪ

ಸಕಲೇಶಪುರ : ಎರಡು ದಿನಗಳಲ್ಲಿ ಜಾತ್ರೆ ಮೈದಾನ ಕಸದಿಂದ ಮುಕ್ತ; ಪುರಸಭ ಅಧ್ಯಕ್ಷ ಕಾಡಪ್ಪ

ಸಕಲೇಶಪುರ : ಎರಡು ದಿನಗಳಲ್ಲಿ ಜಾತ್ರೆ ಮೈದಾನದಲ್ಲಿ ಸುರಿದಿರುವ ಕಸವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲಾಗುವುದು ಎಂದು ಪುರಸಭಾ ಅಧ್ಯಕ್ಷ ಕಾಡಪ್ಪ ಹೇಳಿದರು.
ಪಟ್ಟಣದಲ್ಲಿ ಜಾತ್ರೆ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡಲು ಸೂಕ್ತ ಸ್ಥಳದ ಅಭಾವದಿಂದ ಕಸವನ್ನು ತಾತ್ಕಾಲಿಕವಾಗಿ ಸುಭಾಷ್ ಮೈದಾನದ ಸಮೀಪವಿರುವ ಜಾತ್ರೆ ನಡೆಯುವ ಸ್ಥಳದಲ್ಲಿ ಸುರಿಯುತ್ತಿದ್ದೆವು, ಪುರಸಭೆ ವ್ಯಾಪ್ತಿಯನ್ನು ಸ್ವಚ್ಚವಾಗಿಡುವುದು ಪುರಸಭ ಸದಸ್ಯರು ಮತ್ತು ಅಡಳಿತದ ಆದ್ಯ ಕರ್ತವ್ಯವಾಗಿದೆ. ಆದರೆ ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡುವುದು ತುಂಬಾ ಸಮಸ್ಯೆಯಾಗಿದೆ ,ಈ ನಿಟ್ಟಿನಲ್ಲಿ ಸರಕಾರಕ್ಕೆ ಸೂಕ್ತ ಹೆಚ್ಚುವರಿ ಸ್ಥಳ ಮಾಡುವಂತೆ ಮನವಿ ಮಾಡಿದ್ದೇವೆ ಎಂದರು.
ಪಟ್ಟಣ ಜಾತ್ರೆ ಮೈದಾನದ ಆವರಣದಲ್ಲಿ 36 ಲಕ್ಷ ವೆಚ್ಚದಲ್ಲಿ ಶೂನ್ಯ ತ್ಯಾಜ್ಯ ಘಟಕ ನಿರ್ಮಾಣ ಮಾಡಲು ಸರಕಾರಕ್ಕೆ ಪ್ರಸ್ತಾವನೆಯನ್ನು ಕಳಿಹಿಸಿದ್ದು, ಘಟಕ ನಿರ್ಮಾಣಕ್ಕೆ ಅನುಮೋದನೆಯು ಸಹ ದೊರೆತಿದೆ ಎಂದರು. ಮುಂದಿನ ಕೆಲದಿನಗಳಲ್ಲಿ ಕಸ ವಿಲೇವಾರಿ ಸಮಸ್ಯೆಯನ್ನು ವೈಜ್ಞಾನಿಕವಾಗಿ ಪರಿಹರಿಸುತ್ತೇವೆ ಎಂದರು. .ಮುಂದಿನ ತಿಂಗಳು ನಡೆಯುವ ಸಕಲೇಶಪುರ ಸ್ವಾಮಿ ರಥೋತ್ಸವ ಮತ್ತು ಜಾತ್ರೆ ಮೈದಾನವನ್ನು ಸ್ವಚ್ಚಗೊಳಿಸಿ,  ಸ್ವಚ್ಚ ಪರಿಸರದಲ್ಲಿ ಜಾತ್ರೆ  ನಡೆಯುವಂತೆ ಮಾಡಲು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. ಸಂಘ ಸಂಸ್ಥೆಗಳು ಪುರಸಭೆಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್, ಪರಿಸರ ಇಂಜಿನಿಯರ್‌ ದಾನವೇಂದ್ರ ಮತ್ತು ಪುರಸಭೆ ಸಿಬ್ಬಂದಿ ಚಂದ್ರು ಇನ್ನಿತರರು ಇದ್ದರು

RELATED ARTICLES
- Advertisment -spot_img

Most Popular