Breaking news : 7 ದಿನಗಳ ಹಿಂದೆ ಮೃತ ಪಟ್ಟ ಕಾಡಾನೆ ಮರಿಯ ಮೃತ ದೇಹ ಪತ್ತೆ
ಸಕಲೇಶಪುರದ ಬೈಕೆರೆ ಗ್ರಾಮ ದಲ್ಲಿ ನಡೆದ ಘಟನೆ.
ಸಕಲೇಶಪುರ : ಕಾಡಾನೆಯೊಂದು ಅಶಕ್ತ ಮರಿಗೆ ಜನ್ಮ ನೀಡಿದ ಮರುಕ್ಷಣವೇ ಮರಿಯೊಂದು ಸಾವಿಗೀಡಾಗಿ ಏಳು ದಿನಗಳ ನಂತರ ಮೃತದೇಹ ಪತ್ತೆಯಾದ ಘಟನೆ ನಡೆದಿದೆ.
ತಾಲೂಕಿನ ಬಿರಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಕೆರೆ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಏಳು ದಿನಗಳ ಹಿಂದೆ ಮೃತಪಟ್ಟ ಸ್ಥಿತಿಯಲ್ಲಿ ಕಾಡಾನೆ ಮರಿಯ ಶವ ಪತ್ತೆಯಾಗಿದೆ.
ಪಶು ವೈದ್ಯರ ಪ್ರಕಾರ ತಾಯಿ ಆನೆಯು ಮರಿ ಹಾಕುವ ವೇಳೆ ಅವಧಿಗೆ ಪೂರ್ಣವೇ ಜನ್ಮ ನೀಡಿದ್ದರಿಂದ ಮರಿಯ ಆನೆಯು ಸಾವಿಗೀಡಾಗಿರಬಹುದು ಎಂದು ಶಂಕಿಸಿದ್ದಾರೆ.
ಸ್ಥಳಕ್ಕೆ ಸಹಾಯಕ ಅರಣ್ಯ ಅಧಿಕಾರಿ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.