ಪುರಸಭಾ ಜಾತ್ರೆ ಬಹಿರಂಗ ಹರಾಜನ್ನು ನಿಲ್ಲಿಸಲು ವಕೀಲ ಸುದೀಶ್ ಆಗ್ರಹ.
ಸಕಲೇಶಪುರ: ನಿಯಮ ಉಲ್ಲಂಘನೆ ಮಾಡಿ ಪುರಸಭೆಯ ಜಾತ್ರೆ ಹರಾಜನ್ನು ಮಾಡಲಾಗುತ್ತಿದ್ದು ಕೂಡಲೆ ಇದನ್ನು ನಿಲ್ಲಿಸಲು ಉಪವಿಭಾಗಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ವಕೀಲ ಸುದೀಶ್ ಮನವಿ ಮಾಡಿದ್ದಾರೆ.
ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿ ಪುರಸಭೆಯಲ್ಲಿ ಯಾವುದೇ ಹರಾಜನ್ನು ಬಹಿರಂಗವಾಗಿ ಮಾಡುವಂತಿಲ್ಲ. ನಿಯಮ ಮೀರಿ ಜಾತ್ರೆಗೆ ಬಹಿರಂಗವಾಗಿ ಹರಾಜು ಪ್ರಕ್ರಿಯೆ ಮಾಡಲಾಗುತ್ತಿದೆ. ಬಹಿರಂಗ ಹರಾಜನ್ನು ಎಲ್ಲೂ ಮಾಡುವಂತಿಲ್ಲ, ಕಾನೂನಿನ ಪ್ರಕಾರ ಟೆಂಡರ್ ಕರೆಯಬೇಕು.ಬಹಿರಂಗ ಹರಾಜಿನಿಂದ ಜಾತ್ರೆ ಹೆಚ್ಚಿನ ದರಕ್ಕೆ ಬಿಡ್ ಆಗುವುದರಿಂದ ಪ್ರತಿಯೊಂದು ದರಗಳು ಹೆಚ್ಚಾಗುತ್ತದೆ.ಇದರಿಂದಾಗಿ ಜನಸಾಮಾನ್ಯರಿಗೆ ಹೊರೆಯಾಗುವುದರಿಂದ ಕೂಡಲೆ ಬಹಿರಂಗ ಹರಾಜನ್ನು ನಿಲ್ಲಿಸಿ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂದಿದ್ದಾರೆ.