ಸಕಲೇಶಪುರ: ಸಿವಿಲ್ ನ್ಯಾಯಾಧೀಶರ ಆಯ್ಕೆಗಾಗಿ ನಡೆದ ಪರೀಕ್ಷೆಯಲ್ಲಿ ಇಲ್ಲಿಯ ಯುವ ನ್ಯಾಯವಾದಿ ಕು.ವಿ.ಆರ್. ಅನುಷಾ ಎರಡನೇ ಸ್ಥಾನ ಪಡೆದಿದ್ದಾರೆ.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಸ್ನೇಹಿತರಾದ ಬಿ.ಪಿ.ರಮೇಶ್ ಇವರ ಪುತ್ರಿ. ಹಿರಿಯ ವಕೀಲ ಐ.ಈ. ಪೀತಾಂಬರಾಚಾರ್ ಅಡಿಯಲ್ಲಿ ಕಿರಿಯ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರು ಕೆಎಲ್ಇ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.
ತಾಜಾ ಸುದ್ದಿ