ಜ.21 ರಂದು ಸಕಲೇಶಪುರದಲ್ಲಿ ದಾಸೋಹ ದಿನ ಆಚರಣೆ
ವೀರಶೈವ ಲಿಂಗಾಯತ ಯುವ ಸೇನೆಯಿಂದ ಕಾರ್ಯಕ್ರಮ ಆಯೋಜನೆ – ಸಾಗರ್ ಜಾನೆಕೆರೆ
ಸಕಲೇಶಪುರ : ಪ್ರತಿ ವರ್ಷದಂತೆ ಈ ವರ್ಷವೂ ಜನವರಿ 21ರಂದು ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲಾಗುವುದು ಎಂದು ವೀರಶೈವ ಲಿಂಗಾಯತ ಯುವ ಸೇನೆಯ ತಾಲೂಕು ಅಧ್ಯಕ್ಷ ಜಾನೇಕೆರೆ ಸಾಗರ್ ತಿಳಿಸಿದ್ದಾರೆ.
ಶ್ರೀಗಳ ಪುಣ್ಯ ಸ್ಮರಣೆಯ ದಿನದಂದು ಇಡೀ ರಾಜ್ಯದ್ಯಂತ ದಾಸೋಹ ದಿನವಾಗಿ ಆಚರಣೆ ಮಾಡುತ್ತಿದ್ದು ಅದೇ ರೀತಿ ಸಕಲೇಶಪುರದ ಹಳೆ ಬಸ್ ನಿಲ್ದಾಣ ಸಮೀಪ ಸಾಮೂಹಿಕ ದಾಸೋಹ ವನ್ನು ಏರ್ಪಡಿಸಲಾಗಿದೆ ಎಂದು ಇಂದು ನಡೆದ ಪೂರ್ವಭಾವಿ ಸಭೆಯ ನಂತರ ಮಾಹಿತಿ ನೀಡಿದ್ದಾರೆ.
ಇಡೀ ರಾಜ್ಯಕ್ಕೆ ಸಿದ್ದಗಂಗಾ ಮಠದ ಕೊಡುಗೆ ಅನನ್ಯವಾಗಿದ್ದು ಅಕ್ಷರ,ಅನ್ನ,ವಸತಿ ಮೂಲಕ ತ್ರಿವಿಧ ದಾಸೋಹಿಗಳಾಗಿ ಶಿವಕುಮಾರ ಮಹಾಸ್ವಾಮಿಗಳು ಈ ದೇಶಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅವರ ಲಿಂಗೈಕ್ಯವಾದ ದಿನವನ್ನು ದಾಸೋಹ ದಿನವನ್ನಾಗಿ ರಾಜ್ಯ ಸರ್ಕಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸಮಾಜದ ಹಿರಿಯರ ಮಾರ್ಗದರ್ಶನದಂತೆ ನಡೆಸಲಾಗುತ್ತಿದೆ ಈ ಕಾರ್ಯಕ್ರಮಕ್ಕೆ ಸಕಲೇಶಪುರ ತಾಲೂಕಿನ ಎಲ್ಲಾ ಸಮುದಾಯದ ಜನರು ಪಾಲ್ಗೊಳ್ಳುವಂತೆ ಕೋರಿದ್ದಾರೆ.