ಸಕಲೇಶಪುರ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಅವರನ್ನು ನೇಮಕ ಮಾಡಲಾಗಿದೆ.
ಪಟ್ಟಣದಲ್ಲಿ ವಾಸ್ತವ ನ್ಯೂಸ್ಗೆ ಮಾಹಿತಿ ನೀಡಿದ ಫಾರೂಕ್ , ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹಾಗೂ ಸಂಸದರಾದ ಇಮ್ರಾನ್ ಪ್ರತಾಪಗಿರಿ ಅವರ ನಿರ್ದೇಶನದಂತೆ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಅಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಅವರ ಶಿಫಾರಸಿನ ಮೇರೆಗೆ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದರು.
ಫಾರೂಕ್ ಅವರು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅಲ್ಲದೆ ಹಲವು ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಇವರ ಆಯ್ಕೆಯನ್ನು ಕೆಪಿಸಿಸಿ ಸದಸ್ಯರಾದ ಸಲೀಮ್ ಕೊಲ್ಲಹಳ್ಳಿ, ಯಡೆಹಳ್ಳಿ ಮಂಜುನಾಥ್ ಸ್ವಾಗತಿಸಿದ್ದು ಫಾರೂಕ್ರವರ ಅವಧಿಯಲ್ಲಿ ಪಕ್ಷ ಇನ್ನಷ್ಟು ಸದೃಡವಾಗಲಿ ಎಂದು ಹೇಳಿದ್ದಾರೆ