ಸೆರೆ ಸಿಕ್ಕ 12 ಅಡಿ ಉದ್ಧದ ಕಾಳಿಂಗ ಸರ್ಪ
ಸಕಲೇಶಪುರ : ತಾಲೂಕಿನ ಉಚ್ಚಂಗಿ ಗ್ರಾ.ಪಂ ವ್ಯಾಪ್ತಿಯ ಲಕ್ಕುಂದ ಗ್ರಾಮದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಉರಗ ತಜ್ಞ ರವಿ ಯಶಸ್ವಿಯಾಗಿದ್ದಾರೆ.
ಲಕ್ಕುಂದ ಗ್ರಾಮದ ಲೋಹಿತ್ ಎಂಬುವರ ಗದ್ದೆಯಲ್ಲಿ ಕಾಣಿಸಿಕೊಂಡ ಕಾಳಿಂಗಸರ್ಪವನ್ನು ಚಂಗಡಿಹಳ್ಳಿ ಗ್ರಾಮದ ಉರಗ ತಜ್ಞ ರವಿ ಎಂಬುವರು ಅರಣ್ಯ ಇಲಾಖೆಯವರ ಸಹಯೋಗದಲ್ಲಿ ಹಿಡಿದು ಬಿಸಿಲೆ ರಕ್ಷಿತಾರಣ್ಯಕ್ಕೆ ಬಿಟ್ಡಿರುತ್ತಾರೆ.ಈ ಸಂಧರ್ಭದಲ್ಲಿ ಯಸಳೂರು ವಲಯ ಅರಣ್ಯಾಧಿಕಾರಿ ಜಗದೀಶ್, ಉಪ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್, ಅರಣ್ಯ ವೀಕ್ಷಕ ಕುಮಾರ್ ಹಾಜರಿದ್ದರು.