ಸಕಲೇಶಪುರ : ಬಾಳ್ಳುಪೇಟೆ ವ್ಯಾಪ್ತಿಯಲ್ಲಿ ಕಾಡಾನೆಯಿಂದ ಹಾನಿಗೊಳಗಾದ ಮನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ.
ಸಕಲೇಶಪುರ : ಕಳೆದ ರಾತ್ರಿ ಕಾಡಾನೆ ಒಂದು ತಾಲೂಕಿನ ಬಾಳ್ಳುಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಣಸಮಕ್ಕಿ ಗ್ರಾಮದ ಪರಮೇಶ್ ಎಂಬುವರ ಮನೆಯ ಕಿಟಕಿ, ಶೀಟ್ ಗಳನ್ನು ಒಡೆದು ಹಾಕಿದ್ದ ಹಿನ್ನೆಲೆಯಲ್ಲಿ ಸಕಲೇಶಪುರ ವಲಯದ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬಾಳ್ಳುಪೇಟೆ ಭಾಗದಲ್ಲಿ ಮಕ್ನ ಆನೆಯು ಕಳೆದ ಎರಡು ದಿನಗಳಿಂದ ಬೀಡು ಬಿಟ್ಟಿದ್ದು ಗುರುವಾರ ರಾತ್ರಿ ಬಸವೇಶ್ವರನಗರದ ಅಸ್ಲಾಂ ಪಾಷಾ ಎಂಬುವರ ಮನೆಯ ಕಾಂಪೌಂಡನ್ನು ಹೊಡೆದು ಹಾಕಿತ್ತು.
ಕಾಡಾನೆಯಿಂದ ಹಾನಿಗೊಳಗಾದ ಎರಡು ಮನೆಗಳಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ.