ಸಕಲೇಶಪುರ : ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ತೆರಳಿ ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತ ದಿನೇಶ್ ಅವರ ಅಂತಿಮ ದರ್ಶನವನ್ನು ಕೆಪಿಸಿಸಿ ಸದಸ್ಯ ಸಲೀಮ್ ಕೊಲ್ಲಹಳ್ಳಿ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಎಲ್ಲಡೆ ಕಾಡಾನೆ ಸೇರಿದಂತೆ ವನ್ಯಜೀವಿಗಳ ಉಪಟಳದಿಂದ ರೈತನು ಸೋತು ಹೋಗಿದ್ದಾನೆ. ರೈತ ಬೆಳೆದ ಬೆಳೆಗಳು ಕೈಗೆ ಸಿಗುವ ಸಂದರ್ಭದಲ್ಲಿ ಕಾಡುಪ್ರಾಣಿಗಳ ಪಾಲಾಗುತ್ತಿದೆ, ಕೃಷಿ ಚಟುವಟಿಕೆಗೆ ಬ್ಯಾಂಕು, ಸಂಘ, ಕೈಸಾಲ ಮಾಡಿಕೊಂಡು ರೈತನು ಕೃಷಿಗೆ ತೊಡಗಿಸಿರುತ್ತಾನೆ, ವನ್ಯಜೀವಿಗಳ ಉಪಟಳದಿಂದ ಬೆಳೆಗಳು ನಾಶವಾಗಿ ಸಾಲ ಮರುಪಾವತಿ ಮಾಡಲು ರೈತನು ವಿಫಲನಾಗಿದ್ದಾನೆ. ಸರ್ಪಸಿ ಕಾಯ್ದೆಯನ್ನು ಜಾರಿಗೆ ತಂದು ಬ್ಯಾಂಕುಗಳು ಸಾಲ ಮರು ಪಾವತಿ ಮಾಡಲು ನೋಟಿಸು ಜಾರಿ ಮಾಡುತ್ತಿದೆ ಬ್ಯಾಂಕುಗಳ ಈ ಕ್ರಮದಿಂದ ರೈತನು ಹೆದರಿ ಆತ್ಮಹತ್ಯೆಯ ಕಡೆ ಮುಖ ಮಾಡಿದ್ದಾನೆ. ಸರಕಾರ ತಂದಿರುವ ಮಾರಕ ಕಾಯ್ದೆಯನ್ನು ವಾಪಸ್ ಪಡೆದು ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ಒತ್ತಾಯಿಸಿದರು.