ಸಕಲೇಶಪುರ : ಕಟಾವು ಮಾಡಿದ್ದ ಭತ್ತ ಬೆಳೆ ಕಾಡಾನೆ ಉಪಟಳದಿಂದ ಸಂಪೂರ್ಣ ನಾಶವಾಗಿರುವ ಘಟನೆ ತಾಲ್ಲೂಕಿನ ಬೈಕೆರೆ ಗ್ರಾಮದಲ್ಲಿ ನಡೆದಿದೆ.
ಬೈಕೆರೆ ಗ್ರಾಮದ ಹರೀಶ್ ಎಂಬುವವರಿಗೆ ಸೇರಿದ ಗದ್ದೆಯಲ್ಲಿ ಕಟಾವು ಮಾಡಿದ್ದ ಭತ್ತಗಳನ್ನು ಆನೆಗಳು ನಾಶ ಮಾಡಿದೆ.
ಜನವಸತಿ ಪ್ರದೇಶ ಹಾಗೂ ರೈತರ ಜಮೀನುಗಳಿಗೆ ಆನೆಗಳು ಬರದಂತೆ ತಡೆಯಲು ಅರಣ್ಯ ಇಲಾಖೆ, ಕ್ಯಾಪಿಡ್ ರೆಸ್ಪಾನ್ಸ್ ಟೀಂ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ನಾಡಿಗೆ ಬಂದು ಬೀಡು ಬಿಟ್ಟಿರುವ ಆನೆಗಳನ್ನು ಒಂದೆಡೆಯಿಂದ ಮತ್ತೊಂದು ಕಡೆಗೆ ಅಟ್ಟುವಾಗ ಅವು ಕೃಷಿ ಜಮೀನ ಮೂಲಕವೇ ಸಾಗುತ್ತವೆ, ಇದರಿಂದ ಕೂಡಾ ಸಮಸ್ಯೆ ಹೆಚ್ಚಾಗುತ್ತಿದೆ. ಜತೆಗೆ ಕಾಫಿ ತೋಟಗಳ ಮೇಲೆ ದಾಳಿಯಿಡುವುದಕ್ಕೆ ಶುರುಮಾಡುತ್ತವೆ. ಹೀಗಾಗಿ ಸರಪಳಿಯ ರೀತಿ ಗಜಪಡೆ ರೈತರ ಜಮೀನಿನಲ್ಲಿ ತಮ್ಮ ಓಡಾಟ ಮುಂದುವರೆಸುತ್ತವೆ. ಭತ್ತ ಕಟಾವು ಕಾರ್ಯ ಪೂರ್ಣಗೊಂಡು ಫಸಲು ಮನೆ ತಲಪುವ ಮೊದಲೆ ಆನೆಗಳು ದಾಳಿ ಮಾಡಿ ನಷ್ಟ ಉಂಟಾಗಿದೆ ರೈತರು ತಮ್ಮ ಅಳಲನ್ನು ತೋಡಿ ಕೊಳ್ಳುತ್ತಾರೆ
ಪಟ್ಟಣ ಬಿಟ್ಟರೆ ಉಳಿದ ಎಲ್ಲಾ ಕಡೆ ಕಾಡಾನೆಗಳದ್ದೇ ದರ್ಬಾರ್ ಜೋರಾಗಿದೆ. ನಾವು ರೈತರು ಏನು ಮಾಡುವುದೋ ಗೊತ್ತಾಗ್ತಿಲ್ಲ ಅಂತ ಆನೆ ದಾಳಿಯಿಂದ ತತ್ತರಿಸಿದ ಕೃಷಿಕರು ತಿಳಿಸುತ್ತಾರೆ.