Saturday, April 19, 2025
Homeಕ್ರೈಮ್ಗ್ಯಾಸ್ ಸಿಲಿಂಡರ್ ಸ್ಫೋಟ ; ಮನೆ, ಪೀಠೋಪಕರಣ ಬೆಂಕಿಗೆ ಆಹುತಿ

ಗ್ಯಾಸ್ ಸಿಲಿಂಡರ್ ಸ್ಫೋಟ ; ಮನೆ, ಪೀಠೋಪಕರಣ ಬೆಂಕಿಗೆ ಆಹುತಿ

ಬೇಲೂರು :  ಅಡುಗೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮಗು ಸೇರಿದಂತೆ ಮೂವರು ಪ್ರಾಣಪಾಯದಿಂದ ಪಾರಾಗಿರುವ  ಘಟನೆ ಬೇಲೂರು ತಾಲ್ಲೂಕು ನಾಗೆನಹಳ್ಳಿಯಲ್ಲಿ ನಡೆದಿದೆ. ಶೇಕ್ ಅಲಿ ಎಂಬುವವರ ಮನೆ ಮದ್ಯರಾತ್ರಿ ಸ್ಪೋಟ ಗೊಂಡಿದೆ‌. ಗ್ಯಾಸ್ ವಾಸನೆಗೆ ಎಚ್ಚೆತ್ತ ದಂಪತಿ ಮನೆಯಿಂದ ಹೊರಗೆ ಓಡಿ ಬಂದರು. ಅವರು ಹೊರಗೆ ಓಡಿ ಬರುತ್ತಿದ್ದಂತೆಯೇ ಮನೆಯ ಒಳಗಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಮನೆಯಲ್ಲಿದ್ದ ವಸ್ತುಗಳಿಗೆ ಸಂಪೂರ್ಣ ಹಾನಿಯಾಗಿದೆ. ಆಗ ಆಸುಪಾಸಿನ ಮನೆಯವರೆಲ್ಲ ಓಡಿಬಂದರು. ಬೆಂಕಿ ಅಕ್ಕಪಕ್ಕದ ಮನೆಗೆ ವ್ಯಾಪಿಸದಂತೆ ನೀರು, ಮರಳು ಎರಚಿ ಬೆಂಕಿ ನಂದಿಸಲಾಯಿತು. ಗ್ರಾ.ಪಂ. ಸದಸ್ಯ ಹರೀಶ್ ಹಾಗೂ ಸ್ನೇಹಿತರು ಈ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದರು. ನಂತರ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದರು. ಅಗ್ನಿಶಾಮಕ ದಳ ಆಗಮಿ

RELATED ARTICLES
- Advertisment -spot_img

Most Popular