Saturday, November 23, 2024
Homeಸುದ್ದಿಗಳುಸಕಲೇಶಪುರ : ಜಾತ್ರಾ ವಸ್ತುಪ್ರದರ್ಶನದಲ್ಲಿ ದರ ಪಟ್ಟಿ ನಮೂದಿಸುವಂತೆ ಕೆಂಪೇಗೌಡ ಯುವ ಸೇನೆ ಟ್ರಸ್ಟ್ ಮನವಿ

ಸಕಲೇಶಪುರ : ಜಾತ್ರಾ ವಸ್ತುಪ್ರದರ್ಶನದಲ್ಲಿ ದರ ಪಟ್ಟಿ ನಮೂದಿಸುವಂತೆ ಕೆಂಪೇಗೌಡ ಯುವ ಸೇನೆ ಟ್ರಸ್ಟ್ ಮನವಿ

ಸಕಲೇಶಪುರ : ಜಾತ್ರಾ ವಸ್ತುಪ್ರದರ್ಶನದಲ್ಲಿ ದರ ಪಟ್ಟಿ ನಮೂದಿಸುವಂತೆ ಕೆಂಪೇಗೌಡ ಯುವ ಸೇನೆ ಟ್ರಸ್ಟ್ ಮನವಿ

ಸಕಲೇಶಪುರ: ಮುಂಬರುವ ಸಕಲೇಶ್ವರ ಸ್ವಾಮಿಯವರ ದಿವ್ಯ ರಥೋತ್ಸವ ಅಂಗವಾಗಿ ನಡೆಯುವ ಹರಾಜಿನಲ್ಲಿ ವಸ್ತಪ್ರದರ್ಶನದಲ್ಲಿ ಮಾರಾಟಗೊಳ್ಳಲಿರುವ ವಸ್ತುಗಳ ದರಪಟ್ಟಿ ನಮೂದಿಸಿ ನಂತರ ಟೆಂಡರ್ ಕರೆಯಲು ಪುರಸಭೆ ಮುಂದಾಗಬೇಕೆಂದು ಕೆಂಪೇಗೌಡ ಯುವ ಸೇನೆ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಪುರಸಭೆಯ ವತಿಯಿಂದ ಪಟ್ಟಣದ ಜಾತ್ರಾ ಮೈದಾನದಲ್ಲಿ ನಡೆಸಲಾಗುವ ವಸ್ತು ಪ್ರದರ್ಶನದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಹರಾಜು ಕೂಗುವವರು ವೈಯಕ್ತಿಕ ಪ್ರತಿಷ್ಠೆ ಹಾಗೂ ಹಠಕ್ಕೆ ಬಿದ್ದು ಜಾತ್ರೆಯನ್ನು ಹಲವು ಲಕ್ಷ ರೂ. ಗಳಿಗೆ ಕೂಗಿ ನಂತರ ಬಿಡ್ಡುದಾರರು ಜಾತ್ರೆಯ ಹೆಸರಿನಲ್ಲಿ ಹಣ ಸಂಪಾದಿಸುವ ಕ್ರಿಯೆಯನ್ನು ಇತ್ತೀಚಿನ ಕೆಲವು ವರ್ಷಗಳಿಂದ ನಾವು ಗಮನಿಸುತ್ತಾ ಬಂದಿದ್ದೇವೆ. ಇಲ್ಲಿ ಭಾಗವಹಿಸುವ, ಜೈಂಟ್‌ ಪೀಲ್, ಕೊಲಂಬಸ್, ಟೊರೊಟೊರೊ, ಮಕ್ಕಳ ರೈಲುಗಳು, ಬೈಕುಗಳು ಇತರೆ ಮನರಂಜನೆಯ ಆಟಗಳು ಹಾಗೂ ಇಲ್ಲಿ ಮಾರಾಟ ಮಾಡುವ ತಿಂಡಿ ತಿನಿಸುಗಳು ಮತ್ತು ಮನೆಗಳಿಗೆ ಬೇಕಾಗುವ ಇತರೆ ಗೃಹಪಯೋಗಿ ವಸ್ತುಗಳ ಬೆಲೆಯನ್ನು ದುಬಾರಿ ಮಾಡಿ ಜಾತ್ರೆಯ ವೈಶಿಷ್ಟ್ಯವನ್ನು ಹಾಳು ಮಾಡುತ್ತಿರುವುದು ನಮಗೆ ಬೇಸರ ತಂದಿದೆ. ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರು ಹಾಗೂ ಸ್ಥಳಿಯರು ಜಾತ್ರೆಯಲ್ಲಿ ವಸ್ತುಗಳು, ತಿಂಡಿ ತಿನಿಸುಗಳು, ಗೃಹಪಯೋಗಿ ವಸ್ತುಗಳು ಕಡಿಮೆ ದರದಲ್ಲಿ ಸಿಗುತ್ತದೆಂದು ಜಾತ್ರೆಗೆ ಬರುತ್ತಾರೆ. ಆದರೆ ಇಲ್ಲಿ ಹೊರಗಡೆ ಸಿಗುವ ದರಕ್ಕಿಂತ ದುಪ್ಪಟ್ಟು
ಮಾರಾಟ ಮಾಡುತ್ತಾರೆ. ಹಾಗಾಗಿ ಈ ವರ್ಷ ನಡೆಸುವ ಜಾತ್ರೆಯ ವಸ್ತು ಪ್ರದರ್ಶನದಲ್ಲಿ ಬರುವ ಮನರಂಜನೆ ಹಾಗೂ ತಿಂಡಿ ತಿನಿಸುಗಳು ಇತರ ವಸ್ತುಗಳ ಬೆಲೆಯನ್ನು ಹರಾಜು ಮಾಡುವ ಮುನ್ನವೇ ಪುರಸಭೆಯಿಂದ ನಿಗದಿಪಡಿಸಿ ನಂತರ ಜಾತ್ರೆಯ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು, ಹಾಗೂ ಇತ್ತೀಚಿನ ವರ್ಷಗಳಲ್ಲಿ ಜಾತ್ರೆಯ ರಂಗಮಂದಿರದಲ್ಲಿ ಉತ್ತಮವಾದ ಕಾರ್ಯಕ್ರಮಗಳನ್ನು ನೀಡುವಲ್ಲಿ ಬಿಡ್ಡುದಾರರು / ಪುರಸಭೆಯವರು ವಿಫಲರಾಗಿರುತ್ತಾರೆ. ಇದಕ್ಕೆ ತಪ್ಪಿ ಪುರಸಭೆಯವರು ನಿಯಮ ಮೀರಿ ಜಾತ್ರಾ ವಸ್ತು ಪ್ರದರ್ಶನದ ಹರಾಜು ಪ್ರಕ್ರಿಯೆಯನ್ನು ನಡೆಸಿದರೆ, ತಾಲ್ಲೂಕಿನ ಇತರೆ ಸಂಘಟನೆಗಳನ್ನು ಸೇರಿಸಿಕೊಂಡು ನಮ್ಮ ಸಂಘಟನೆಯ ವತಿಯಿಂದ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇವೆ. ದಯವಿಟ್ಟು ತಾವುಗಳು ಮೇಲ್ಕಂಡ ವಿಷಯಗಳ ಬಗ್ಗೆ ಗಮನ ಹರಿಸಿ ನಂತರ ಜಾತ್ರೆಯ ಬಿಡ್ಡನ್ನು ನಡೆಸಬೇಕೆಂದು ಎಂದು ತಮ್ಮಲ್ಲಿ ವಿನಂತಿಸುತ್ತೇವೆ.
ಈ ಸಂಧರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ್, ತಾಲೂಕು‌ ಅಧ್ಯಕ್ಷ ಸಚ್ಚಿನ್, ನಗರ ಅಧ್ಯಕ್ಷ ಹೇಮಂತ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -spot_img

Most Popular