Saturday, November 23, 2024
Homeಸುದ್ದಿಗಳುಸಕಲೇಶಪುರಬಗರ್ ಹುಕುಂ‌‌ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲಾಗುವುದು: ಶಾಸಕ ಎಚ್.ಕೆ ಕುಮಾರಸ್ವಾಮಿ

ಬಗರ್ ಹುಕುಂ‌‌ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲಾಗುವುದು: ಶಾಸಕ ಎಚ್.ಕೆ ಕುಮಾರಸ್ವಾಮಿ

 

ಸಕಲೇಶಪುರ : ಬಗರ್ ಹುಕುಂ ಸಮಿತಿ ವತಿಯಿಂದ ಕಡತಗಳನ್ನು ವಿಲೇವಾರಿ ಮಾಡಲು ಅರಣ್ಯ ಇಲಾಖೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಶಾಸಕ ಎಚ್ ಕೆ ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಬಗರ್ ಹುಕುಂ ಸಮಿತಿ ಸಭೆಯ ನಂತರ ಮಾತನಾಡಿದ ಅವರು ತಾಲೂಕಿನಲ್ಲಿ ಇಂದು ಬಗರ್ ಹುಕುಂ ಸಮಿತಿ ಸಭೆ ನಡೆದಿದ್ದು ಸಭೆಯಲ್ಲಿ 90 ಕಡತಗಳನ್ನು ಪರಿಶೀಲನೆ ನಡೆಸಿದ್ದೇವೆ . ಮೊದಲನೆ ಸಮಿತಿಯಲ್ಲಿ ಉರ್ಜಿತಗೊಂಡು ಎರಡನೇ ಸಭೆಗೆ ಬಂದಿರುವ 39 ಕಡತಗಳನ್ನು ವಿಲೇವಾರಿ ಮಾಡದೆ ಇರಿಸಿಕೊಂಡಿದ್ದೇವೆ ಯಾವುದೇ ಅರ್ಜಿಗಳನ್ನು ತಿರಸ್ಕರಿಸಿಲ್ಲವೆಂದು ಹೇಳಿದರು. ತಾಲೂಕಿನ ಹಲವೆಡೆ ಹೇಮಾವತಿ ಜಲಾಶಯ ಯೋಜನೆ ಸಂತ್ರಸ್ಥರಿಗೆ,ಮಾಜಿ ಸೈನಿಕರಿಗೆ ಹಾಗೂ ಅರಣ್ಯಕ್ಕೆ ಜಾಗವನ್ನು ಕಾಯ್ದಿರಿಸಲಾಗಿದ್ದು,ಇದರಿಂದಾಗಿ ಬಗರ್ ಹುಕುಂ ಸಮಿತಿಗೆ ಎಲ್ಲಾ ಅರ್ಜಿದಾರರಿಗೂ ಜನರಿಗೆ ಭೂಮಿಯನ್ನು ಮಂಜೂರು ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಇಂದು ಸಭೆ ನಡೆದು ಬಗರ್ ಹುಕುಂ ಸಮಿತಿಯ ಸದಸ್ಯರು ಹಾಗೂ ನಾನು ಜಿಲ್ಲಾಧಿಕಾರಿಗಳಿಗೆ ನಿರ್ಣಯವನ್ನು ಬರೆದು ಹೇಮಾವತಿ ಜಲಾಶಯಕ್ಕೆ ಮೀಸಲಿಟ್ಟಿರುವ ಜಾಗದಲ್ಲಿ ಸಂತ್ರಸ್ತರಿಗೆ ಮಂಜೂರಾತಿ ಆಗದೆ, ಸಂತ್ರಸ್ತರಿಗೆ ಬೇಡವಾದ ಭೂಮಿಯನ್ನು ವಾಪಾಸು ಪಡೆದು ಸದರಿ ಜಾಗದಲ್ಲಿ ಸುಮಾರು 40 ವರ್ಷದಿಂದ ಸಾಗುವಳಿ ಮಾಡುತ್ತಿರುವವರಿಗೆ ಸಾಗುವಳಿ ಚೀಟಿ ನೀಡಲು ಅನುಕೂಲವಾಗುವಂತೆ ಹೇಮಾವತಿ ಜಲಾಶಯ ಯೋಜನೆ ಮೀಸಲಾತಿ ಅಡಿಯಿಂದ
ಜಾಗವನ್ನು ಕೈಬಿಡಬೇಕೆಂದು ಒಕ್ಕೊರಲಿನಿಂದ ನಿರ್ಣಯ ಕೈಗೊಂಡು ಸರಕಾರ ಮತ್ತು ಕಂದಾಯ ಇಲಾಖೆಗೆ ಆಗ್ರಹ ಮಾಡಿದ್ದೇವೆ ಎಂದರು. ಆರಣ್ಯ ಇಲಾಖೆಯು ಎಲ್ಲಾ ಕಡೆಯು ಅರಣ್ಯಕ್ಕೆ ಮೀಸಲಾಗಿದೆ ಎಂದು ಹೇಳುತ್ತದೆ, ಜಿಲ್ಲಾಧಿಕಾರಿಗಳು ಸಮಸ್ಯೆಯನ್ನು ಶೀಘ್ರವಾಗಿ ಸರಕಾರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಂಡರೆ ಅರ್ಹ ಫಲಾನುಭವಿಗಳಿಗೆ ಬಗರ್ ಹುಕುಂ ಸಮಿತಿ ಫಾರಂ ನಂಬರ್ 50 ,53 ರಲ್ಲಿ ಜಾಗ ಮಂಜೂರು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಗರ್ ಹುಕುಂ ಸಮಿತಿ ಸದಸ್ಯ ರಾಜ್ ಕುಮಾರ್ ಮಾತನಾಡಿ, ಸುಮಾರು ತೊಂಬತ್ತು ಕಡತಗಳನ್ನು ಸುದೀರ್ಘವಾಗಿ ಪರಿಶೀಲನೆ ನಡೆಸಿದ್ದೇವೆ, ಹೇಮಾವತಿ ಜಲಶಾಯ ಯೋಜನೆ, ಅರಣ್ಯ ಇಲಾಖೆ ಮತ್ತು ಮಾಜಿ ಸೈನಿಕರಿಗೆ ಮೀಸಲಿಟ್ಟ ಜಾಗದಲ್ಲಿ ಸಾಗುವಳಿ ಚೀಟಿ ನೀಡಲು ಕಾನೂನು ತೊಡಕುಗಳು ಎದುರಾಗಿದೆ.ಈ ಕಾರಣಕ್ಕಾಗಿ ಕೆಲವು ಕಡತಗಳನ್ನು ತಿರಸ್ಕರಿಸದೆ ವಿಲೇವಾರಿ ಮಾಡದೆ ಕಾಯ್ದಿರಿಸಿದ್ದೇವೆ‌. ಸರಕಾರ ಮದ್ಯ ಪ್ರವೇಶ ಮಾಡಿ ಅಕ್ರಮ ಸಾಗವಳಿದಾರರ ನೆರವಿಗೆ ಬರಬೇಕೆಂದು ಹೇಳಿದರು.
ಸಭೆಯಲ್ಲಿ ಬಗರ್ ಹುಕುಮ್ ಸಮಿತಿಯ ಮಾಸುವಳ್ಳಿ ಚಂದ್ರು, ವನಜಾಕ್ಷಿ, ತಹಶಿಲ್ದಾರ್ ಮೇಘನಾ, ಶಿರಸ್ಥೆದಾರ್ ಉಮೇಶ್, ರಾಜಸ್ವ ನಿರೀಕ್ಷರಾದ ಸುರೇಶ್, ಚಂದ್ರು , ಅಭಿಲಾಶ್ ಮತ್ತು ಮಲ್ಲಿಕಾರ್ಜುನ ಇದ್ದರು

RELATED ARTICLES
- Advertisment -spot_img

Most Popular