ತಂಬಲಗೇರಿ ಶೂಟೌಟ್ ಪ್ರಕರಣ : ಇಬ್ಬರ ಬಂಧನ ತೀವ್ರ ವಿಚಾರಣೆ
ಸಕಲೇಶಪುರ : ತಂಬಲಗೇರಿ ಗುಂಡಿನ ದಾಳಿ ಸಂಬಂಧ ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಪೈಕಿ ಓರ್ವ, ಈ ಹಿಂದೆ ಇದೇ ರೀತಿಯ ಒಂದು ಪ್ರಕರಣದಲ್ಲಿ ಕೇಸ್ ದಾಖಲಾಗಿದೆ. ಬೆಳೆ ರಕ್ಷಣೆಗೆ ನೀಡಿರುವ ಲೈಸೆನ್ಸ್ ಗನ್ ದುರ್ಬಳಕೆ ಮಾಡಿಕೊಂಡು ಶಿಕಾರಿ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನವೀನ್ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲೂ ಗುರುತಿಸಿಕೊಂಡಿದ್ದು, ಈ ಘಟನೆಗೆ ರಾಜಕೀಯ, ಮತ್ತಿತರ ಯಾವುದೇ ಸಂಬಂಧ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದ್ದಾರೆ.