Saturday, April 12, 2025
Homeಕ್ರೀಡೆಸಕಲೇಶಪುರ.. ನ್ಯಾಷನಲ್ ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ಬಾಗೆ ಜೆ. ಎಸ್.ಎಸ್ ಶಾಲೆಯ ವಿಧ್ಯಾರ್ಥಿ...

ಸಕಲೇಶಪುರ.. ನ್ಯಾಷನಲ್ ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ಬಾಗೆ ಜೆ. ಎಸ್.ಎಸ್ ಶಾಲೆಯ ವಿಧ್ಯಾರ್ಥಿ ನಿ ಟೈನಿಷಾ ಸಿ.ವೈ ಗೆ ಪ್ರಥಮ ಸ್ಥಾನ .

 

ಹಾಸನದಲ್ಲಿ ನಡೆದ ನ್ಯಾಷನಲ್ ಶೋಟೊಕಾನ್ ಕರಾಟೆ ಮಲ್ಟಿ ಪರ್ಪಸ್ ಫೆಡರೇಷನ್‌ ಚಾಂಪಿಯನ್ ಶಿಪ್ 2023 ನಲ್ಲಿ ತಾಲೂಕಿನ‌ಬಾಗೆ ಜೆ.ಎಸ್.ಎಸ್ ಶಾಲೆಯ 8 ನೇ ತರಗತಿಯ ವಿಧ್ಯಾರ್ಥಿನಿ ಟೈನಿಷಾ ಸಿ.ವೈ ಎಂ.ಪಿ ಕಥಾದಲ್ಲಿ ಪ್ರಥಮ ಸ್ಥಾನ ಹಾಗೂ ವೆಪನ್ ಕಥಾದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಈ ವಿಧ್ಯಾರ್ಥಿ ಬೆಳಮೆ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷ ರಾದ ಬಿಕ್ಕೋಟೆ ಗ್ರಾಮದ ಯಶವಂತ್ ಕುಮಾರ ಹಾಗೂ ನವ್ಯ ದಂಪತಿಯ ಪುತ್ರಿ ಯಾಗಿದ್ದಾಳೆ. ಈ ವಿಧ್ಯಾರ್ಥಿನಿಗೆ ಮಾ#ರಾಜೇಂದ್ರ ರವರು ತರಬೇತಿ ನೀಡುತ್ತಿದ್ದಾರೆ. ರಾಷ್ಟ್ರ ಮಟ್ಟದ ಈ ಸ್ಪರ್ಧೆಯಲ್ಲಿ ಆಂಧ್ರ ಪ್ರದೇಶದಿಂದ 5 ತಂಡ, ತೆಲಂಗಾಣ ದಿಂದ 2 ತಂಡ, ಮಹಾರಾಷ್ಟ್ರದಿಂದ 2, ಪಂಜಾಬ್, ಉತ್ತರ ಪ್ರದೇಶ ಕೇರಳ, ತಮಿಳು ನಾಡಿನಿಂದ ತಲಾ 1 ತಂಡ ಹಾಗೂ ಕರ್ನಾಟಕ ದಿಂದ 10 ತಂಡಗಳು ಭಾಗವಹಿಸಿದ್ದವು.

RELATED ARTICLES
- Advertisment -spot_img

Most Popular