ಸಕಲೇಶಪುರ ಪಟ್ಟಣಕ್ಕೆ ಸ್ವಾಗತ ಫಲಕ ಹಾಕಲು ಬಜರಂಗದಳ ಮನವಿ
ಸಕಲೇಶಪುರ: ಏಲಕ್ಕಿಯ ತವರೂರು ಸಕಲೇಶಪುರಕ್ಕೆ ಸ್ವಾಗತ ಎಂದು ನಾಮಫಲಕ ಹಾಕುವಂತೆ ಸಕಲೇಶಪುರ ಆಲೂರು ಕ್ಷೇತ್ರದ ಮಾನ್ಯ ಶಾಸಕರಾದ ಎಚ್.ಕೆ ಕುಮಾರಸ್ವಾಮಿಯವರಿಗೆ ಬಜರಂಗದಳ ವತಿಯಿಂದ ಮನವಿ ಮಾಡಲಾಯಿತು.
ಈ ಸಂಧರ್ಭದಲ್ಲಿ ಬಜರಂಗದಳ ರಾಜ್ಯ ಸಹ ಸಂಚಾಲಕ ರಘು ಸಕಲೇಶಪುರ ಮನವಿ ಮಾಡಿ ಬಹುತೇಕ ಪಟ್ಟಣಗಳಲ್ಲಿ ಪಟ್ಟಣ ಪ್ರವೇಶ ಮಾಡುವಾಗ ಸ್ವಾಗತ ಕಮಾನು ಇರುತ್ತದೆ. ಆದರೆ ಸಕಲೇಶಪುರದಲ್ಲಿ ಸ್ವಾಗತ ಫಲಕ ಇರುವುದಿಲ್ಲ. ಕೂಡಲೇ ಸ್ವಾಗತ ಫಲಕ ಹಾಕಲು ಕ್ರಮ ಕೈಗೊಳ್ಳಬೇಕು ಎಂದರು. ಮನವಿಗೆ ಸ್ಪಂದಿಸಿದ ಶಾಸಕರು ಸಂಘಟನೆ ಮತ್ತು ಸಾರ್ವಜನಿಕರ ಬಹುದಿನಗಳ ಅಪೇಕ್ಷೆಯಿದಾಗಿದ್ದು ಕೊಲ್ಲಹಳ್ಳಿ ಬಳಿ ಒಂದು ಸ್ವಾಗತ ಕೋರುವ ಬೋರ್ಡ್ ಮತ್ತು ಆನೆಮಹಲ್ ಬಳಿ ಒಂದು ಸ್ವಾಗತ ಕೋರುವ ಫಲಕವನ್ನು ಒಂದು ತಿಂಗಳ ಒಳಗೆ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಒಂದು ತಿಗಳಲ್ಲಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕವನ್ ಗೌಡ, ಸಂಘಟನೆಯ ಜಿಲ್ಲಾಸಹ ಸಂಯೋಜಕ ಕೌಶಿಕ್,ಗೋರಕ್ಷ ಪ್ರಮುಖ್ ಪ್ರದೀಪ್, ಸಹ ಸಂಯೋಜಕ ಕಾರ್ತಿಕ್, ಶೇಖರ್ ಪೂಜಾರಿ, ಆಟೋ ಘಟಕದ ಸಂಯೋಜಕ ಹರೀಶ್, ಸುಪ್ರೀತ್, ರವಿ ಮಳಲಿ ಉಪಸ್ಥಿತಿ ಇದ್ದರು.