ಬಿಜೆಪಿ ಬೆಳಗೋಡು ಮಹಾ ಶಕ್ತಿ ಕೇಂದ್ರದ ವತಿಯಿಂದ ಬೂತ್ ವಿಜಯ ಅಭಿಯಾನ
ಸಕಲೇಶಪುರ ಪಕ್ಷದ ಸೂಚನೆಯಂತೆ ಸಂಘಟನಾತ್ಮಕವಾಗಿ ಮತಗಟ್ಟೆಗಳನ್ನು ಸಶಕ್ತಗೊಳಿಸಲು ಜ.2 ರಿಂದ 12ರ ವರೆಗೆ ನಡೆಯಲಿರುವ ‘ಬೂತ್ ವಿಜಯ ಅಭಿಯಾನ’ದ ಮೂಲಕ ವಿಧಾನಸಭಾ ಚುನಾವಣೆಗೆ ಬಿಜೆಪಿ ರಣಕಹಳೆ ಮೊಳಗಿಸಲಿದೆ ಭಾರತೀಯ ಜನತಾ ಪಾರ್ಟಿಯ ಬೆಳಗೋಡು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಮೆಣಸಮಕ್ಕಿ ಉದಯ ಶಂಕರ್ ಹೇಳಿದರು.
ಭಾನುವಾರ ತಾಲೂಕಿನ ಬೆಳಗೋಡು ಹೋಬಳಿ ಉದೇವಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೂತ್ ವಿಜಯ ಅಭಿಯಾನ’ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಲ್ಲ ವರ್ಗಗಳ ಜನತೆಯ ಅಭ್ಯುದಯಕ್ಕೆ ಜಾರಿಗೆ ತಂದಿರುವ ವಿವಿಧ ಜನಪರ ಯೋಜನೆಗಳನ್ನು ಮನೆ ಮನೆಗಳಲ್ಲಿ ಪ್ರಚಲಿತಗೊಳಿಸುವ ಜೊತೆಗೆ ಬೂತ್ ಮಟ್ಟದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಈ ಸಂಧರ್ಭದಲ್ಲಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್,ಉದೇವಾರ ಗ್ರಾಮ ಪಂಚಾಯತಿ ಅಧ್ಯಕ್ಷೆ ಮೈತ್ರಿ, ವೆಂಕಟೇಶ್ ಸೇರಿದಂತೆ ಮುಂತಾದವರಿದ್ದರು.