Sunday, November 24, 2024
Homeಸುದ್ದಿಗಳುಆಲೂರು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆ ತೆರೆಯಲು ಅಗ್ರಹ: ಸಿಮೆಂಟ್ ಮಂಜು. 

ಆಲೂರು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆ ತೆರೆಯಲು ಅಗ್ರಹ: ಸಿಮೆಂಟ್ ಮಂಜು. 

 

ಆಲೂರು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆ ತೆರೆಯಲು ಅಗ್ರಹ: ಸಿಮೆಂಟ್ ಮಂಜು.

 

ಆಲೂರು : ಶುಕ್ರವಾರ ರಾತ್ರಿ ಹಾಂಜಿಹಳ್ಳಿ ಗ್ರಾಮದಲ್ಲಿ ಮೆಕ್ಕೆಜೋಳದ ರಾಶಿ ಬೆಂಕಿಗಾಹುತಿಯಾಗಿ ಭಸ್ಮವಾಗಿದ್ದ ಸ್ಥಳಕ್ಕೆ ಬಿಜೆಪಿ ಮುಖಂಡ ಸಿಮೆಂಟ್ ಮಂಜು ರವರು ಧನ ಸಹಾಯ  ನೀಡಿ ಸಾಂತ್ವನ ಹೇಳಿದರು.

 

ಆಲೂರು ತಾಲ್ಲೂಕು ಕೇಂದ್ರವಾದರೂ ಈವರೆಗೆ ಅಗ್ನಿಶಾಮಕ ಠಾಣೆ ತೆರೆಯಲು ಜನಪ್ರತಿನಿದಿಗಳು, ಅಧಿಕಾರಿಗಳು ಆಸಕ್ತಿ ತೋರಲಿಲ್ಲ. ತಾಲ್ಲೂಕು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆ ಇದ್ದಿದ್ದರೆ ಇಷ್ಟೊಂದು ಪ್ರಮಾಣದ ನಷ್ಟವಾಗುತ್ತಿರಲಿಲ್ಲ.

ಅಗ್ನಿ ಅವಘಡ ಎದುರಾದ ಸಂದರ್ಭದಲ್ಲಿ ಆಲೂರಿನಿಂದ ೧೮ ಕಿ.ಮೀ. ದೂರದ ಹಾಸನದಿಂದ ಅಗ್ಮಿಶಾಮಕ ಲಾರಿ ಬರುವ ವೇಳೆಗೆ ಬಹುತೇಕ ಸುಟ್ಟು ಬೂದಿಯಾಗಿರುತ್ತದೆ. ಈಗಲಾದರೂ ಜನಪ್ರತಿನಿದಿಗಳು, ಅಧಿಕಾರಿಗಳು ತಾಲ್ಲೂಕು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆ ತೆರೆಯಲು ಮುಂದಾಗಬೇಕು.

ಬೆಂಕಿ ಅವಘಡದಿಂದ ಕನಿಷ್ಠ ೧೫ ಲಕ್ಷಕ್ಕೂ ಹೆಚ್ಚು ನಷ್ಟವಾಗಿದ್ದು, ಸರ್ಕಾರ ನಷ್ಟ ಭರಿಸಲು ಮುಂದಾಗಬೇಕು. ತಹಶೀಲ್ದಾರ್ ಮಟ್ಟದಲ್ಲಿ ಕೇವಲ ೨೦ ಸಾವಿರ ಪರಿಹಾರ ದೊರಕುತ್ತದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಂತ್ರಿಗಳೊಂದಿಗೆ ಚರ್ಚಿಸಿ ಹೆಚ್ಚು ಪರಿಹಾರ ನೀಡಲು ಶ್ರಮಿಸುತ್ತೇನೆ ಜನಪ್ರತಿನಿದಿಗಳು ಕೇವಲ ಸಾಂತ್ವನ ಹೇಳುವ ಪರಿಪಾಠ ಮಾಡಿಕೊಂಡಿದ್ದಾರೆ ಅದರಿಂದ ಸಂತ್ರಸ್ತರ ಸಮಸ್ಯೆ ಅಥವಾ ಹೊಟ್ಟೆ ತುಂಬುವುದಿಲ್ಲ ಅವರಿಗೆ ಕೈಲಾದ ಆರ್ಥಿಕ ಸಹಾಯ ಮಾಡುವುದರ ಮೂಲಕ ಮಾನವೀಯತೆ ಮೇರೆಯಬೇಕು ಆಗ ಮಾತ್ರ ಕುಟುಂಬಕ್ಕೆ ಶಕ್ತಿ ತುಂಬಿದಂತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬೈರಾಪುರ ಗ್ರಾಮ ಪಂಚಾಯಿತಿ ಸದಸ್ಯ ರುದ್ರೇಗೌಡ,ಗಣೇಶ್,ಬೈರಾಪುರ ಗ್ರಾಮದ ಹಿರಿಯ ಮುಖಂಡ ಮಂಜಪ್ಪ,ದೇವರಾಜು,ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

 

 

RELATED ARTICLES
- Advertisment -spot_img

Most Popular