ಬಾಣಾವರದಲ್ಲಿ ನಡೆಯುವ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಸಭೆಗೆ ತೆರಳಿದ ಕಾಂಗ್ರೆಸ್ ಅಲ್ಪ ಸಂಖ್ಯಾತ ಮುಖಂಡರುಗಳು.
ಸಕಲೇಶಪುರ: ಮುಂಬರುವ ಚುನಾವಣಾ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗದಂತೆ ಮತ್ತು ಮತಗಳನ್ನು ಕ್ರೂಡಿಕರಿಸಲು ಜಿಲ್ಲೆಯ ವಿವಿಧ ಭಾಗದಲ್ಲಿ ಜಿಲ್ಲಾ ಅಲ್ಪಾ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಸಮದ್ ಮತ್ತು ಕೆಪಿಸಿಸಿ ಸದಸ್ಯ ಸಲೀಮ್ ಕೊಲ್ಲಹಳ್ಳಿ ನೇತೃತ್ವದಲ್ಲಿ ಸಭೆಗಳು ನಡೆಯುತ್ತಿದೆ.
ಕೆಪಿಸಿಸಿ ಸದಸ್ಯ ಸಲೀಮ್ ಕೊಲ್ಲಹಳ್ಳಿ ಮಾತನಾಡಿ ಇಂದು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರುಗಳನ್ನು ಕರೆದು ಸಭೆ ನಡೆಸಲಾಗುತ್ತಿದೆ. ಈ ಸಭೆಯನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರ ಮತಗಳನ್ನು ಅತಿ ಹೆಚ್ಚಾಗಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವಂತೆ ನೋಡಿಕೊಳ್ಳುವುದು ಎಲ್ಲಾ ಮುಖಂಡರುಗಳ ಕರ್ತವ್ಯವಾಗಿದೆ ಹಾಗೂ ಎಲ್ಲಾರು ಒಗ್ಗಟ್ಟಾಗಿ ಯಾವುದೆ ಅಭ್ಯರ್ಥಿ ಇರಲಿ ಒಟ್ಟಾರೆ ಕಾಂಗ್ರೆಸ್ ಪಕ್ಷದ ಪರ ಮತದಾನ ಮಾಡಿ ಅನ್ಯ ಪಕ್ಷಗಳಿಗೆ ಮುಸ್ಲಿಂರ ಮತಗಳು ಹೋಗದಂತೆ ನೋಡಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಪಕ್ಷ ಮಾತ್ರ ನೈಜವಾಗಿ ಮುಸ್ಲಿಂರ ಪರವಿದ್ದು ಕಾಂಗ್ರೆಸ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಿದರೆ ಮುಸ್ಲಿಂರಿಗೆ ಹೆಚ್ಚಿನ ಸೌಲಭಗಳು ದೊರಕುವುದರಲ್ಲಿ ಅನುಮಾನವಿಲ್ಲ, ಈ ನಿಟ್ಟಿನಲ್ಲಿ ಮುಸ್ಲಿಂ ಮುಖಂಡರ ಸಭೆಗಳನ್ನು ಸಂಘಟಿಸಲಾಗುತ್ತಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ತಸ್ಲೀಮ್, ಮಹಮ್ಮದ್, ಖಾಸೀಮ್ ಹಕೀಂ, ನಿಸಾರ್, ಆದಮ್ ಹಾಜಿ ಮತ್ತು ಯೂಸುಫ್ ಬಾವು ಇದ್ದರು