Monday, November 25, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ : ತಾಲ್ಲೂಕು ಸರಕಾರಿ ನೌಕರರ ಸಂಘದ 2023 ಸಾಲಿನ ಕ್ಯಾಲೆಂಡರ್ ಬಿಡುಗಡೆ ; ಕಾರ್ಯಕ್ರಮ...

ಸಕಲೇಶಪುರ : ತಾಲ್ಲೂಕು ಸರಕಾರಿ ನೌಕರರ ಸಂಘದ 2023 ಸಾಲಿನ ಕ್ಯಾಲೆಂಡರ್ ಬಿಡುಗಡೆ ; ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಚ್ ಕೆ ಕುಮಾರಸ್ವಾಮಿ

ಸಕಲೇಶಪುರ : ತಾಲ್ಲೂಕು ಸರಕಾರಿ ನೌಕರರ ಸಂಘದ 2023 ಸಾಲಿನ ಕ್ಯಾಲೆಂಡರನ್ನು ಶಾಸಕ ಎಚ್ ಕೆ ಕುಮಾರಸ್ವಾಮಿ ಬಿಡುಗಡೆ ಮಾಡಿದರು.
ಪಟ್ಟಣದ ನೌಕರರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ರಾಜ್ಯ ಸರ್ಕಾರಿ‌ ನೌಕರರ ಸಂಘವು ಕೇವಲ ತಮ್ಮ ಬೇಕು ಬೇಡಿಕೆಗಳ‌ ಬಗ್ಗೆ ಮಾತ್ರ ಹೋರಾಟ ಮಾಡದೇ,ನೌಕರರ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ನೌಕರರ ಮತ್ತು ಜನ ಪ್ರಧಿನಿಧಿಗಳ ಕೆಲಸ ತುಂಬಾ ಒತ್ತಡದಿಂದ ಕೂಡಿರುತ್ತದೆ ಅದರ ನಡುವೆಯು ಸಾರ್ವಜನಿಕರ ಕೆಲಸಗಳನ್ನು ಮಾಡಿ ಕೊಡುವ ಮೂಲಕ ಜನರ ವಿಶ್ವಾಸವನ್ನು ಗಳಿಸಿಕೊಳ್ಳಬೇಕು ಎಂದರು. ಸರಕಾರಿ ನೌಕರರು ಪ್ರತೀಭಟನೆಯಲ್ಲಿ ಪಾಲ್ಗೊಳ್ಳಬಾರದು ಎಂಬ ನಿಯಮವಿದ್ದರು ತಮ್ಮ ಹಕ್ಕನ್ನು ಪಡೆಯಲು ಹೋರಾಟ ಮಾಡಬೇಕು ಎಂದರು. ಎನ್ ಪಿ ಎಸ್ ಪದ್ದತಿ ರದ್ದು ಮಾಡಿ ಒಪಿಎಸ್ ಪದ್ದತಿಯನ್ನು ಜಾರಿಗೆ ತರಬೇಕು ಎಂಬ ಬೇಡಿಕೆ ನ್ಯಾಯಯುತವಾಗಿದೆ ಎಂದರು. ಈ ಬಗ್ಗೆ ಅದಿವೇಶನ ನಡೆಯುವ ಸಂದರ್ಭದಲ್ಲಿ ಸರಕಾರದ ಗಮನ ಸೆಳೆಯಲು ಪ್ರಯತ್ನ ಪಟ್ಟರು ಸಾದ್ಯವಾಗಿಲ್ಲ, ಮುಂದಿನ ಫೆಬ್ರವರಿಯಲ್ಲಿ ನಡೆಯುವ ಈ ಅವಧಿಯ ಕೊನೆಯ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದರು.
ಪುರಸಭಾ ಅಧ್ಯಕ್ಷ ಕಾಡಪ್ಪ ಮಾತನಾಡಿ, ತಾಲ್ಲೂಕಿನ ನೌಕರರು ಹಲವು ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಮನವಿ ಸಲ್ಲಿದ್ದಾರೆ ತನ್ನ ಅಧಿಕಾರದ ಮಿತಿಯೊಳಗೆ ಬೇಡಿಕೆಯನ್ನು ಪೂರೈಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ್, ತಾಲ್ಲೂಕು ಕಾರ್ಯನಿರ್ವಣಾಧಿಕಾರಿ ವೆಂಕಟೇಶ್, ಅಕ್ಷರ ದಾಸೋಹದ ಮಂಜುನಾಥ್, ವಿಶ್ವೇಶ್ವರಯ್ಯ ಜಲ ನಿಗಮದ ಕೆಂಚ್ಚಯ್ಯ, ಡಾ ಮಧುಸೂದನ್, ಅರೋಗ್ಯ ಇಲಾಖೆಯ ಲಕ್ಷ್ಮೀ, ಗ್ರಾಮ ಪಂಚಾಯಿತಿಯ ಸಹಾಯಕ ನಿರ್ದೇಶಕರಾದ ಆಧಿತ್ಯ, ಹರೀಶ್ ಸೇರಿದಂತೆ ಇತರರು ಇದ್ದರು

RELATED ARTICLES
- Advertisment -spot_img

Most Popular