ಸಕಲೇಶಪುರ : ಅಕ್ಕಮಹಾದೇವಿ ಮಹಿಳಾ ವೇದಿಕೆಯಿಂದ 2023 ರ ಹೊಸ ವರ್ಷ ಆಚರಣೆ.
ಸಿದ್ದೇಶ್ವರ ಶ್ರೀಗಳಿಗೆ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ.
ಸಕಲೇಶಪುರ : ಮಲೆನಾಡು ವೀರಶೈವ ಸಮಾಜದ ಅಂಗ ಸಂಸ್ಥೆಯಾದ ಅಕ್ಕಮಹಾದೇವಿ ಮಹಿಳಾ ವೇದಿಕೆಯಿಂದ 2023 ರ ಹೊಸ ವರ್ಷದ ಆಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಮೊನ್ನೆ ನಿಧನರಾದ ಜ್ಞಾನ ಯೋಗ ಆಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ವೇದಿಕೆ ವತಿಯಿಂದ ಗೌರವ ನಮನ ಸಲ್ಲಿಸಲಾಯಿತು.
ಅಕ್ಕಮಹಾದೇವಿ ಮಹಿಳಾ ವೇದಿಕೆ ಅಧ್ಯಕ್ಷೆ ಶಶಿಕಲಾ ಲೋಕೇಶ್ ಮಾತನಾಡಿ,ಜನ ಮಾನಸದಲ್ಲಿ ಜ್ಞಾನ ಬಿತ್ತಿದ ಸಿದ್ದಪುರುಷ ಸಿದ್ದೇಶ್ವರ ಸ್ವಾಮೀಜಿ ಯಾಗಿದ್ದರು.ಸಮಾಜವನ್ನು ತಿದ್ದುವ ಸ್ವಾಮೀಜಿಗಳು ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆಯಂತಿದ್ದವರು ಸಿದ್ದೇಶ್ವರ ಸ್ವಾಮೀಜಿ. ಅನ್ನದಾತ, ಜ್ಞಾನದಾತರಾದ ಸಿದ್ದೇಶ್ವರ ಸ್ವಾಮೀಜಿಗಳು ‘ಕಾಯಕ ಯೋಗಿ’ ಅಂತನೂ ಗೌರವದಿಂದ ಕರೆಯಲ್ಪಟ್ಟವರು. ತಮ್ಮ ಪ್ರಚವನಗಳ ಮೂಲಕವೇ ಅದೆಷ್ಟೋ ಜನರಿಗೆ ದಾರಿ ದೀಪವಾಗಿದ್ದರು ಎಂದರು.
ಬದುಕಿನ ಬಗ್ಗೆ ಸ್ವಾಮೀಜಿ ಮಾತು ಕುದಿಯುವವರು ಕುದಿಯಲಿ ಉರಿಯುವವರು ಉರಿಯಲಿ ನಿನ್ನ ಪಾಡಿಗೆ ನೀನು ಇರು.ಕುದಿಯುವವರು ಆವಿಯಾಗುತ್ತಾರೆ ಉರಿಯುವವರು ಬೂದಿಯಾಗುತ್ತಾರೆ ಎಂಬ ಶ್ರೀಗಳ ಪ್ರವಚನ ನೆನಪಿಸಿಕೊಂಡರು.ತಾಲೂಕು ಅಕ್ಕಮಹಾದೇವಿ ವೇದಿಕೆಗೆ 25 ವರ್ಷ ತುಂಬಿದೆ.ಇದುವರೆಗೂ ವೇದಿಕೆಯಿಂದ ಹಲವಾರು ಜನಪರ ಕೆಲಸ ಮಾಡಿದ್ದೇವೆ. ಮಲೆನಾಡು ವೀರಶೈವ ಸಮಾಜದ ಜೊತೆಗೂಡಿ ಸಮಾಜ ಕಟ್ಟುವ ಕೆಲಸಕ್ಕೆ ಕೈ ಜೋಡಿಸಿದ್ದೇವೆ ಎಂದು ತಿಳಿಸಿದರು.ವೇದಿಕೆ ಅಸ್ತಿತ್ವಕ್ಕೆ ಬಂದ ವರ್ಷ ಕೇವಲ 20-25 ಜನರಿದ್ದ ವೇದಿಕೆ ಇಂದು 600 ಕ್ಕೂ ಹೆಚ್ಚು ಸದಸ್ಯರು ವೇದಿಕೆಯಲ್ಲಿದ್ದಾರೆ ಎಂದರು.
ತಾ.ಪಂ ಮಾಜಿ ಸದಸ್ಯೆ ಚೈತ್ರ ನವೀನ್ ಮಾತನಾಡಿ, ಪ್ರತಿ ವರ್ಷ ಹೊಸ ಆಚರಣೆ ಕಾರ್ಯಕ್ರಮ ನೆಡೆಸಿಕೊಂಡು ಬರುತ್ತಿದ್ದೇವೆ. ಸಮಾಜದ ಮಹಿಳಾ ಸದಸ್ಯರು ಅಖಿಲ ಭಾರತ ವೀರಶೈವ ಮಹಾ ಸಭಾಕ್ಕೆ ಸದಸ್ಯರಾಗಲು ಮುಂದೆ ಬರಬೇಕು ಮುಂದಿನ ದಿನಗಳಲ್ಲಿ ಮಹಾ ಸಭಾದ ಅಧ್ಯಕ್ಷರು ಶಾಮನೂರು ಶಿವಶಂಕ್ರಪ್ಪ ನವರ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಸಿಲಾಗಿದೆ. ಈ ಕಾರ್ಯಕ್ರಮ ತಾಲೂಕಿನಿಂದ ಹೆಚ್ಚು ಜನರು ಬರುವಂತೆ ಮನವಿ ಮಾಡಿದರು.
ಸಭಾ ಕಾರ್ಯಕ್ರಮದ ನಂತರ ಮಹಿಳೆಯರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಂಧರ್ಭದಲ್ಲಿ ಅಕ್ಕಮಹಾದೇವಿ ಮಹಿಳಾ ವೇದಿಕೆಯ ಕಾರ್ಯದರ್ಶಿ ವಿಜಯ ಧನ್ಯ ಕುಮಾರ್,ಕನ್ನಡ ಸಾಹಿತ್ಯ ಪರಿಷತ್ ಬೆಳೆಗೋಡು ಹೋಬಳಿ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಅಕ್ಕಮಹಾದೇವಿ ಮಹಿಳಾ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷೆ ರೇಖಾ ಸುರೇಶ್, ವೇದಿಕೆಯ ಖಜಾಂಚಿ ವನ ನಾಗೇಶ್ ಸೇರಿದಂತೆ ಮುಂತಾದವರಿದ್ದರು.